UK Suddi
The news is by your side.

ಕರ್ನಾಟಕ ಸಿಇಟಿ 2016ರ ಮೇ 4,5 ಮತ್ತು 6ಕ್ಕೆ ಮುಂದೂಡಿಕೆ

ಬೆಂಗಳೂರು: ಸೆಂಟ್ರಲ್ ಬೋರ್ಡ್ ಆಪ್ ಸೆಕೆಂಡರಿ ಎಜುಕೇಷನ್(ಸಿಬಿಎಸ್​ಸಿ) ಅಖಿಲ ಭಾರತ ಮಟ್ಟದ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್​ಗಳ ಪ್ರವೇಶ ಪರೀಕ್ಷೆ 2016ರ ಮೇ.1ರಂದು ನಡೆಯಲಿರುವುದರಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಸಿಇಟಿಯನ್ನು 2016ರ ಮೇ 4,5 ಮತ್ತು 6ಕ್ಕೆ ಮುಂದೂಡಿದೆ.

ವೈದ್ಯಕೀಯ, ದಂತವೈದ್ಯಕೀಯ, ಇಂಜಿನಿಯರಿಂಗ್, ವಾಸ್ತುಶಿಲ್ಪ, ಆಯುರ್ವೆದ, ಯುನಾನಿ, ಯೋಗ, ನ್ಯಾಚೂರೋಪಥಿ, ಹೋಮಿಯೋಪಥಿ, ಕೃಷಿ ವಿಜ್ಞಾನ, ಪಶುವೈದ್ಯಕೀಯ, ಪಶುಸಂಗೋಪನೆ. ರೇಷ್ಮೆ, ಅರಣ್ಯ, ತೋಟಗಾರಿಕೆ, ಬಿ-ಫಾಮ್ರ್ ಹಾಗೂ ಡಿ-ಫಾಮ್ರ್ ಮೊದಲಾದ ವೃತ್ತಿಪರ ಕೋರ್ಸ್​ನ ಸರ್ಕಾರಿ ಕೋಟಾದ ಸೀಟಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ 2016ರ ಮೇ 1, 2 ಮತ್ತು 3ರಂದು ನಡೆಸುವುದಾಗಿ ಘೊಷಿಸಿತ್ತು. ಇದೇ ದಿನಾಂಕದಂದು ಎಐಪಿಎಂಟಿ ನಡೆಯುವುದರಿಂದ ಕೆಇಎ ಸಿಇಟಿ ಮೇ 4 ಮತ್ತು 5 ಹಾಗೂ 6ರಂದು ನಡೆಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.

For North Karnataka News visit www.uksuddi.in

Comments