UK Suddi
The news is by your side.

ಸೋನಿಯಾ, ರಾಹುಲ್ ಗೆ ಬೇಲ್

ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಯ ಪ್ರಕಾಶನ ಸಂಸ್ಥೆ ಅಸೋಸಿಯೇಟೆಡ್‌ ಜರ್ನಲ್ಸ್‌ ಪರಭಾರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ಮತ್ತಿತರರು ಶನಿವಾರ ಪಟಿಯಾಲ ಹೌಸ್‌ ನ್ಯಾಯಾಲಯಕ್ಕೆ ಹಾಜರಾಗಿದ್ದು, ಶ್ಯೂರಿಟಿ ಮತ್ತು ತಲಾ 50 ಸಾವಿರ ಬಾಂಡ್ ಆಧಾರದ ಮೇಲೆ ಯಾವುದೇ ಷರತ್ತಿಲ್ಲದೇ ಜಾಮೀನು ಮಂಜೂರು ಮಾಡಿದೆ.

ಸೋನಿಯಾ ಗಾಂಧಿಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಶ್ಯೂರಿಟಿ ನೀಡಿದ್ದರೆ, ರಾಹುಲ್ ಗಾಂಧಿಗೆ ಪ್ರಿಯಾಂಕಾ ಗಾಂಧಿ ಶ್ಯೂರಿಟಿ ನೀಡಿದರು. ಒಬ್ಬರ ಶ್ಯೂರಿಟಿ, ತಲಾ 50 ಸಾವಿರ ರೂಪಾಯಿ ಬಾಂಡ್ ನೀಡುವಂತೆ ಕೋರ್ಟ್ ಸೂಚಿಸಿ, ಫೆ.20ಕ್ಕೆ ವಿಚಾರಣೆಯನ್ನು ಮುಂದೂಡಿದೆ.

For North Karnataka News visit www.uksuddi.in

Comments