UK Suddi
The news is by your side.

ಹರಿಹರ-ಯಶವಂತಪುರ ಇಂಟರ್‌ಸಿಟಿ ವೇಳಾಪಟ್ಟಿ ಬದಲಿಗೆ ಮನವಿ

ಹರಿಹರದಿಂದ ಯಶವಂತಪುರಕ್ಕೆ ಸಂಚರಿಸುವ ಇಂಟರ್‌ಸಿಟಿ ರೈಲಿನ ವೇಳಾಪಟ್ಟಿ ಬದಲಿಸಿ, ಮಧ್ಯ ಕರ್ನಾಟಕ ಭಾಗದ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಕೇಂದ್ರ ಸಚಿವ ಜಿ.ಎಂ. ಸಿದ್ದೇಶ್ವರ್‌ ರೈಲ್ವೆ ಸಚಿವ ಸುರೇಶ್‌ ಪ್ರಭು ಅವರಿಗೆ ಮನವಿ ಸಲ್ಲಿಸಿದ್ದಾರೆ.

ಹಾಲಿ ರೈಲು ಬೆಳಿಗ್ಗೆ 5 ಗಂಟೆಗೆ ಹರಿಹರದಿಂದ, ಸಂಜೆ 4.30ಕ್ಕೆ ಯಶವಂತಪುರದಿಂದ ಬಿಡುತ್ತಿದೆ. ಇದರ ಬದಲು ಬೆಳಿಗ್ಗೆ 6 ಗಂಟೆಗೆ ಹರಿಹರ ಹಾಗೂ ಸಂಜೆ 6 ಗಂಟೆಗೆ ಯಶವಂತಪುರ ಬಿಡುವಂತೆ ಕ್ರಮ ಕೈಗೊಳ್ಳಬೇಕು. ಜೊತೆಗೆ ರೈಲು ಬೆಂಗಳೂರಿಗೆ ತಲುಪುವಂತೆ ಮಾಡಬೇಕು. ಹಾಲಿ ಇರುವ ನಿಲುಗಡೆಗಳ ಜೊತೆಗೆ ಹೊಳಲ್ಕೆರೆ, ಬೀರೂರು ಜಂಕ್ಷನ್‌ಗಳಲ್ಲಿ ನಿಲುಗಡೆ ನೀಡಬೇಕು. ಆಗ ರೈಲಿನ ಆದಾಯ ಹೆಚ್ಚಳ ಆಗಲಿದೆ.

For North Karnataka News visit www.uksuddi.in

Comments