UK Suddi
The news is by your side.

ಹುಬ್ಬಳ್ಳಿಯ ಉಣಕಲ್ ಬಳಿ ಹಳಿ ತಪ್ಪಿದ ಎಕ್ಸ್ ಪ್ರೆಸ್ ರೈಲು

ಹುಬ್ಬಳ್ಳಿಯ ಉಣಕಲ್ ಬಳಿ ಎರಡು ಎಕ್ಸ್ ಪ್ರೆಸ್ ರೈಲುಗಳ ಬೋಗಿಗಳು ಹಳಿತಪ್ಪಿದ ಘಟನೆ ಸೋಮವಾರ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

ಯಶವಂತಪುರದಿಂದ ಮುಂಬೈ ಕಡೆ ಹೊರಟಿದ್ದ ಕುರ್ಲಾ ಎಕ್ಸ್ ಪ್ರೆಸ್ ಹಾಗೂ ಧಾರವಾಡದಿಂದ ಹೈದರಾಬಾದ್ ಕಡೆಗೆ ಹೊರಟಿದ್ದ ಚಾಲುಕ್ಯ ಎಕ್ಸ್ ಪ್ರೆಸ್ ರೈಲಿನ ಬೋಗಿಗಳು ಹಳಿ ತಪ್ಪಿದ ಘಟನೆ ನಡೆದಿತ್ತು.

ಕ್ರಾಸಿಂಗ್ ಮಾಡುವ ವೇಳೆ ಏಕಕಾಲಕ್ಕೆ ರೈಲುಗಳ ಬೋಗಿಗಳು ಹಳಿ ತಪ್ಪಿದ್ದವು. ಸ್ಥಳಕ್ಕೆ ರೈಲ್ವೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ.

For North Karnataka News visit www.uksuddi.in

Comments