UK Suddi
The news is by your side.

ಕೊಬ್ಬು ಕರಗಿಸಲು ಮಲಗುವ ಮುನ್ನ ಕುಡಿಯಬಹುದಾದ 2 ಪಾನೀಯಗಳು

ಕೊಬ್ಬು ಕರಗಿಸಲು ಮಲಗುವ ಮುನ್ನ ನೀವು ಕುಡಿಯಬಹುದಾದ 2 ಅದ್ಭುತ ಪಾನೀಯಗಳು..!

ದೇಹದಲ್ಲಿ ಕೊಬ್ಬು ಸಂಗ್ರಹಗೊಳ್ಳಲು ಅನೇಕ ಕಾರಣಗಳಿವೆ. ಅಸಮರ್ಪಕವಾದ ಆಹಾರಗಳು, ರಕ್ತದೊತ್ತಡ, ಮಧುಮೇಹ, ಹಾರ್ಮೋನ್ ವ್ಯತ್ಯಾಸ ಮೊದಲಾದ ಸಮಸ್ಯೆಗಳು ಮನುಷ್ಯನನ್ನು ದಪ್ಪಗಾಗಿಸುತ್ತವೆ. ಹೀಗಾಗಿ, ವ್ಯಾಯಾಮ ಇತ್ಯಾದಿ ನಿರ್ದಿಷ್ಟ ರೀತಿಯಲ್ಲಿ ಈ ಸಮಸ್ಯೆಗಳನ್ನು ಸರಿಪಡಿಸಲಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಕೆಲ ಪರಿಣಾಮಕಾರಿ ಪಾನೀಯಗಳು ಹಾಗೂ ಅವುಗಳನ್ನು ತಯಾರಿಸುವ ಬಗೆಯನ್ನು ಇಲ್ಲಿ ನೀಡಿದ್ದೇವೆ.

ಪಾನೀಯ 1:

ಒಂದು ನಿಂಬೆಹಣ್ಣಿನ ರಸ, ಒಂದು ಟೀಸ್ಪೂನಷ್ಟು ತುರಿದ ಶುಂಠಿ, ಒಂದು ಚಿಕ್ಕ ಸೌತೆಕಾಯಿ ಹಾಗೂ ಒಂದು ಕಟ್ಟು ಪಾರ್ಸ್ಲೀ ಸೊಪ್ಪು (ಅಜುಮೂಡ). ಇವಿಷ್ಟನ್ನು ಚೆನ್ನಾಗಿ ರುಬ್ಬಿ ಜ್ಯೂಸ್ ಮಾಡಿರಿ. ಈ ರಸ ದಟ್ಟವಾಗಿದ್ದರೆ ಅದಕ್ಕೊಂದಿಷ್ಟು ನೀರು ಹಾಕಿರಿ. ನೀವು ಮಲಗುವ ಮುನ್ನ ಈ ಜ್ಯೂಸ್ ಸೇವಿಸಿರಿ. ಹೀಗೆ 10 ದಿನ ಕುಡಿದರೆ ನಿಮ್ಮ ಹೊಟ್ಟೆಯ ಬೊಜ್ಜು ಸುಲಭವಾಗಿ ಕರಗುತ್ತದೆ.

ಪರಿಣಾಮ: ಈ ಪಾನೀಯವು ಹೊಟ್ಟೆ ಕರಗಿಸುವ ಕೆಲವಷ್ಟೇ ಅಲ್ಲ, ಇತರ ಅನೇಕ ಪ್ರಯೋಜನಗಳನ್ನು ನಮಗೆ ಮಾಡುತ್ತವೆ. ನಮ್ಮ ದೇಹದ ವಿಷಕಾರಿ ವಸ್ತುಗಳನ್ನು ಇದು ಕಿತ್ತುಹಾಕುತ್ತದೆ. ನಾವು ತಿನ್ನುವ ಆಹಾರದಲ್ಲಿರುವ ಪೌಷ್ಟಿಕಾಂಶಗಳನ್ನು ದೇಹ ಹೀರಿಕೊಳ್ಳಲು ಇದು ನೆರವಾಗುತ್ತದೆ. ಪಚನಕ್ರಿಯೆ ಸುಗಮವಾಗುವಂತೆ ಮಾಡಿ ಒಟ್ಟಾರೆ ದೇಹದ ತೂಕವೂ ಇಳಿಸುತ್ತದೆ. ನಮ್ಮ ದೇಹಕ್ಕೆ ತಗುಲಿದ ಕೆಲ ಸೋಂಕನ್ನ ಇದು ನಾಶಮಾಡುತ್ತದೆ. ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಪಾನೀಯ 2:

ಒಂದು ಪೇರಳೆ ಅಥವಾ ಸೀಬೆ ಹಣ್ಣು(ಪಿಯರ್), ಒಂದು ನಿಂಬೆಹಣ್ಣು, ಒಂದು ಚಿಕ್ಕ ಸೌತೆಕಾಯಿ ಹಾಗೂ ಒಂದು ಕಟ್ಟು ಪಾಲಾಕ್ ಸೊಪ್ಪು ಇವಿಷ್ಟನ್ನು ರುಬ್ಬಿ ಜ್ಯೂಸ್ ಮಾಡಿ ಮಲಗುವ ಮುನ್ನ ಕುಡಿಯಿರಿ. 10 ದಿನಗಳವರೆಗೆ ಈ ಪಾನೀಯ ಸೇವಿಸಿದರೆ ಹೊಟ್ಟೆಯ ಬೊಜ್ಜು ಬಹಳಷ್ಟು ಕರಗುತ್ತದೆ.

ಪರಿಣಾಮ: ಈ ಪಾನೀಯವು ನಮ್ಮ ದೇಹದಲ್ಲಿರುವ ಫ್ಯಾಟ್ ಸೆಲ್’ಗಳನ್ನು ನಾಶ ಮಾಡುವ ಕೆಲಸ ಮಾಡುತ್ತದೆ. ಇದರಲ್ಲಿರುವ ಸಿಟ್ರಿಕ್ ಆ್ಯಸಿಡ್ ಹೊಟ್ಟೆಯನ್ನು ಬೇಗ ಕರಗಿಸುತ್ತದೆ. ಲಿವರ್ (ಯಕೃತ್ತು) ಅನ್ನು ಸ್ವಚ್ಛಗೊಳಿಸಿ ಪಚನ ಕಾರ್ಯಕ್ಕೆ ನೆರವಾಗುತ್ತದೆ. ಪೇರಳೆಹಣ್ಣಿನಲ್ಲಿರುವ ಫೈಬರ್ ಅಂಶವು ಕೊಬ್ಬು ಕರಗಿಸಲು ಸಹಕಾರಿ. ಪಾಲಾಕ್ ಸೊಪ್ಪು ಆ್ಯಸಿಡಿಟಿಯನ್ನು ತೊಲಗಿಸಿ ದೇಹವನ್ನು ತಂಪಾಗಿ ಇಡುತ್ತದೆ.

ಮೇಲೆ ಹೇಳಿದ ಎರಡೂ ಕಷಾಯಗಳು ದೇಹದೊಳಗಿನ ವಿಷಕಾರಿ ವಸ್ತುಗಳನ್ನು ಹೊರಹಾಕಿ ಶುದ್ಧವಾಗಿರಿಸುತ್ತವೆ. ಡಯಾಬಿಟಿಸ್, ಬಿಪಿ ಮೊದಲಾದ ಸಮಸ್ಯೆಯನ್ನೂ ನಿವಾರಿಸುತ್ತದೆ. ಹಾರ್ಮೋನ್ ವ್ಯತ್ಯಾಸವಿದ್ದರೂ ಸರಿಪಡಿಸುತ್ತದೆ. ಕೊಬ್ಬಿನ ಅಂಶಗಳನ್ನು ತೊಲಗಿಸುತ್ತದೆ.

(ಮಾಹಿತಿ: ಬೋಲ್ಡ್’ಸ್ಕೈ)

For North Karnataka News visit www.uksuddi.in

Comments