ಕತ್ತು ನೋವು ಬಂದೀತು ಮೊಬೈಲ್ ಬಳಕೆದಾರರೆ ಎಚ್ಚರ
ಮೂವತ್ತೈದರ ಹರೆಯದ ಸಾಫವೇರ್ ಡೆವಲಪರ್ ಸರಿತಾಗೆ ನಿರಂತರವಾದ ಕುತ್ತಿಗೆ ನೋವು ಜೀವನದ ಭಾಗವಾಗಿದೆ. ಆರು ತಿಂಗಳ ಹಿಂದೆ ಆಗ್ಗಾಗ್ಗೆ ತಲೆನೋವಿನೊಂದಿಗೆ ಆಕೆಯ ಕುತ್ತಿಗೆಯಲ್ಲಿ ಬಿರುಸು ಗಮನಕ್ಕೆ ಬರುವುದರೊಂದಿಗೆ ಇದು ಶುರುವಾಯಿತು.
ಕುತ್ತಿಗೆ ನೋವು ಮಿತಿ ಮೀರಿದಾಗ ಮಾತ್ರ ಆಕೆ ವೈದ್ಯರ ಸಲಹೆ ಪಡೆದರು. ಆಗ, ಅತಿಯಾದ ಮೊಬೈಲ್ ಟೆಕ್ಸ್ಟ್ ಮಾಡುವುದರಿಂದ ಉಂಟಾಗುವ ಟೆಕ್ಸ್ಟ್ಫ ನೆಕ್ನಿಂದ ಆಕೆ ಬಳಲುತ್ತಿರುವುದು ಪತ್ತೆಯಾಯಿತು.
ಯುವಕರು ಈಗಿನ ದಿನಗಳಲ್ಲಿ ಆರೋಗ್ಯದ ಅರಿವಿಲ್ಲದೆ ತುಂಬಾ ಸಮಯವನ್ನು ಟೆಕ್ಸ್ಟ್ ಮಾಡುವುದರಲ್ಲಿ ಮತ್ತು ಮೊಬೈಲ್ ಚಾಟ್ ಅಪ್ಲಿಕೇಷನ್ನಲ್ಲಿ ಕಳೆಯುತ್ತಾರೆ. ಆದಾಗ್ಯೂ, ಬಹುತೇಕ ಮಂದಿ, ತಮ್ಮ ತಲೆಯನ್ನು ಮುಂದಕ್ಕೆ ಚಾಚಿ ಸೆಲ್ಫನ್ಗಳಲ್ಲಿ ವೇಳೆ ಕಳೆಯುವುದರಿಂದ ಅದು ಅಪಾಯಕ್ಕೆ ಕಾರಣವಾಗುತ್ತದೆ. ಇದರಿಂದಾಗಿ ಉಲ್ಬಣವಾಗುವ ಸ್ಥಿತಿಯನ್ನು ಟೆಕ್ಸ್ಟ್ ನೆಕ್ ಎಂದು ಕರೆಯಲಾಗುತ್ತದೆ ಪದೇಪದೆ ಮುಂದಕ್ಕೆ ಚಾಚುವುದರಿಂದ ಕುತ್ತಿಗೆಯ ಬೆನ್ನುಮೂಳೆಯ ತಿರುವು ಮತ್ತು ಮೂಳೆ ಭಾಗಗಳಲ್ಲಿ ಭಂಗಿಯಲ್ಲಿ ಬದಲಾವಣೆ, ಸ್ನಾಯುವಿನ ಬಿಗಿತ ಮತ್ತು ನೋವಿಗೆ ಕಾರಣವಾಗುತ್ತದೆ. ಅದಕ್ಕಿಂತ ಹೆಚ್ಚಾಗಿ, ಚಳಿಗಾಲ ಆವರಿಸುತ್ತಿರುವುದರಿಂದ, ಚಳಿಗಾಲದ ದಿರಿಸುಗಳು ಕುತ್ತಿಗೆಯ ಮೇಲೆ ಹೆಚ್ಚುವರಿ ಒತ್ತಡ ಹೇರುವುದರಿಂದ ಬೆನ್ನುಮೂಳೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಇಲ್ಲಿವೆ, ಕೆಲವು ಪರಿಹಾರ
ಇಂದಿನ ಡಿಜಿಟಲ್ ಯುಗದಲ್ಲಿ ತಂತ್ರಜನ ಮತ್ತು ಮೊಬೈಲ್ ಸಾಧನಗಳನ್ನು ಬಿಟ್ಟಿರುವುದು ಅಸಾಧ್ಯ. ಆದಾಗ್ಯೂ ಅವುಗಳನ್ನು ವಿವೇಕದಿಂದ ಬಳಸಿ ಎಂದು ಆರೋಗ್ಯ ತಜ್ಞರು ಯುವಜನತೆಗೆ ಕಿವಿಮಾತು ಹೇಳುತ್ತಾರೆ. ಕಾಲಕಾಲಕ್ಕೆ ಎಳೆತದ ವ್ಯಾಯಾಮವನ್ನು ಮಾಡುವುದು, ಮೊಬೈಲ್ ಅನ್ನು ಸಾಧ್ಯವಾದಷ್ಟು ಕಣ್ಣಿನ ಮಟ್ಟಕ್ಕೆ ಹಿಡಿಯುವುದು ಮತ್ತು ಕಚೇರಿ ದಕ್ಷತೆಯನ್ನು ಕಲಿಯುವುದು ಸ್ವಲ್ಪ ಮಟ್ಟಿಗೆ ‘ಟೆಕ್ಸ್ಟ್ ನೆಕ್’ ಸಿಂಡ್ರೋಮ್ ತಡೆಯುವ ಕೆಲವು ವಿಧಾನ.
“ಕುತ್ತಿಗೆಯ ಡಿಸ್ಕ್ ಬದಲಾವಣೆ ಥೆರಪಿಯಲ್ಲಿ ಹಳೆಯ ಮತ್ತು ರೋಗಕ್ಕ ತುತ್ತಾದ ಡಿಸ್ಕ್ ಅನ್ನು ಕೃತಕ ಡಿಸ್ಕ್ನೊಂದಿಗೆ ಬದಲಾಯಿಸಲಾಗುತ್ತದೆ. ಈ ಚಲಿಸುವ ಲೋಹದ ಡಿಸ್ಕ್ನ್ನು ಎರಡು ಕಶೇರುಖಂಡಗಳ ನಡುವೆ ತೂರಿಸಲಾಗುತ್ತದೆ. ಇದು ನೈಸರ್ಗಿಕ ಡಿಸ್ಕ್ನಂತೆಯೇ ಬಾಗುವಿಕೆ, ತಿರುಗಿಸುವಿಕೆ, ಬದಿಗೆ ಬಾಗುವಿಕೆಯ ಸಹಿತ ಗರಿಷ್ಠ ಚಲನೆಗೆ ಅವಕಾಶ ಒದಗಿಸುತ್ತದೆ. ಈ ಚಿಕಿತ್ಸೆಯಲ್ಲಿ ರೋಗಿಯು ಕ್ಷಿಪ್ರವಾಗಿ ಚೇತರಿಸಿಕೊಳ್ಳುತ್ತಾನೆ.
| ಡಾ.ಅರ್ಜುನ್ ಶ್ರೀವಾತ್ಸವ, ಕೊಲಂಬಿಯಾ ಏಷ್ಯಾ ಆಸ್ಪತ್ರೆ ಹಿರಿಯ ನರತಜ್ಞ