UK Suddi
The news is by your side.

ಗವಿಸಿದ್ದೇಶ್ವರ ಜಾತ್ರೆಯ ಮಹಾದಾಸೋಹಕ್ಕೆ 50 ಕ್ವಿಂಟಲ್‌ ಮಾದಲಿ

ಕೊಪ್ಪಳ: ಜನವರಿ 26ರಿಂದ ನಡೆಯಲಿರುವ ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಯ ಮಹಾದಾಸೋಹಕ್ಕೆ ಕೊಡುಗೆಯಾಗಿ ಸಮೀಪದ ಶಹಾಪುರ ಗ್ರಾಮದಿಂದ ಸುಮಾರು 50 ಕ್ವಿಂಟಲ್‌ ‘ಮಾದಲಿ’ ತಯಾರಿಸುವ ಕಾರ್ಯ ಭರದಿಂದ ನಡೆದಿದೆ.

ಜಾತ್ರೆಯ ಪ್ರಯುಕ್ತ  20 ರಿಂದ 30ದಿವಸಗಳ ಕಾಲ ನಡೆಯುವ ‘ದಾಸೋಹ’ಕ್ಕೆ ಬೇಕಾದ ಖಾದ್ಯಗಳು ಮತ್ತು ಜೋಳ, ಸಜ್ಜೆಯ ರೊಟ್ಟಿ ಗರಿಷ್ಠ ಪ್ರಮಾಣದಲ್ಲಿ ಸುತ್ತಲಿನ ಹಳ್ಳಿಯಿಂದ ಮಠಕ್ಕೆ ದೇಣಿಗೆಯಾಗಿ ಹೋಗುತ್ತವೆ ಎಂಬುದು ವಿಶೇಷ. ಈ ಜಾತ್ರೆಯ ದಾಸೋಹದಲ್ಲಿ ಅನ್ನಮಾತ್ರವಲ್ಲ , ಸಿಹಿ ಪದಾರ್ಥಗಳಾದ ಮಾದಲಿ, ಬೂಂದಿಲಾಡು, ಕರ್ಜಿಕಾಯಿ, ಅದಕ್ಕೆ ತುಪ್ಪ ಜೊತೆಗೆ ಜೋಳ ಮತ್ತು ಸಜ್ಜೆಯ  ರೊಟ್ಟಿ, ವಿಧ ವಿಧದ ಪಲ್ಯ ಕೂಡ ದೊರೆಯುತ್ತದೆ. ಇವೆಲ್ಲ ಪದಾರ್ಥಗಳನ್ನು ಭಕ್ತರು ಮಠಕ್ಕೆ ದೇಣಿಗೆಯಾಗಿ ನೀಡುತ್ತಾರೆ.

For North Karnataka News visit www.uksuddi.in

Comments