24ರಂದು ಬಾದಾಮಿ ಬನಶಂಕರಿದೇವಿ ರಥೋತ್ಸವ
ಜಾತ್ರಾ ಮಹೋತ್ಸವ ಕಾರ್ಯಕ್ರಮಗಳು:
ಇದೇ 16ರಂದು ನವರಾತ್ರಿ ಆರಂಭ ಘಟ ಸ್ಥಾಪನೆ, ಗರುಡ ಪಟ ಕಟ್ಟುವುದು.
23ರಂದು ಪಲ್ಲೇದ ಹಬ್ಬ,
24ರಂದು ಸಂಜೆ 5ಕ್ಕೆ ರಥೋತ್ಸವ.
28ರಂದು ಕಳಸ ಇಳಿಸಲಾಗುವುದು.
16ರಂದು ಘಟ ಸ್ಥಾಪನೆ ಇರುವುದರಿಂದ ಬೆಳಿಗ್ಗೆ 9.30ರವರೆಗೆ ಮಾತ್ರ ಧರ್ಮ ದರ್ಶನಕ್ಕೆ ಅವಕಾಶವಿರಲಿದೆ ಎಂದು ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಭಕ್ತರು ಮತ್ತು ಕಮಿಟಿ ವತಿಯಿಂದ ಬನಶಂಕರಿದೇವಿ ಜಾತ್ರೆಯ ರಥದ ಕಳಸಕ್ಕೆ ಈ ಬಾರಿ 250 ಗ್ರಾಂ ಚಿನ್ನ ಲೇಪನದ ಕಳಸ ತಯಾರಿಸಲಾಗಿದೆ’ ಎಂದು ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಮಲ್ಲಾರಭಟ್ ಪೂಜಾರ ಹೇಳಿದರು.
For North Karnataka News visit www.uksuddi.in