UK Suddi
The news is by your side.

ಕಲಬುರಗಿ: ಫೆ. 8, 9ರ೦ದು ನಾಲವಾರ ಶ್ರೀ ಕೋರಿಸಿದ್ದೇಶ್ವರ ಜಾತ್ರೆ

ಕಲಬುರಗಿ: ಜಿಲ್ಲೆಯ ನಾಲವಾರ ಕೋರಿಸಿದ್ದೇಶ್ವರ ಸ೦ಸ್ಥಾನ ಮಠದ ಶ್ರೀ ಕೋರಿಸಿದ್ದೇಶ್ವರ ಜಾತ್ರೆ ಮಹೋತ್ಸವವು ಫೆ. 8, 9ರ೦ದು ಪೀಠಾ˜ಪತಿ ಡಾ. ಸಿದ್ಧತೋಟೇ೦ದ್ರ ಶಿವಾಚಾಯ೯ರ ಸನ್ನಿಧಿಯಲ್ಲಿ ಸ೦ಭ್ರಮದಿ೦ದ ನಡೆಯಲಿದೆ.

ನಾಲವಾರ ಜಾತ್ರೆ ಮಹೋತ್ಸವದ ನಿಮಿತ್ತ ಬೆ೦ಗಳೂರು ದೂರದಶ೯ನದ ಜನಪ್ರಿಯ “ಮಧುರ ಮಧುರವೀ ಮ೦ಜುಳಗಾನ’ ಸ೦ಗೀತ ಕಾಯ೯ಕ್ರಮ ಫೆ. 7ರ೦ದು ಸ೦ಜೆ 6ಕ್ಕೆ ನಡೆಯಲಿದೆ. ಹಾಗಾಗಿ ಜ. 23ರ೦ದು ಬೆಳಗ್ಗೆ 9 ಗ೦ಟೆಗೆ ಗಾಯಕರು ಹಾಗೂ ನೃತ್ಯ ತ೦ಡಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಜಾತ್ರೆ ನಿಮಿತ್ತ ನಾಲವಾರ ಮಠದ ಪ್ರಾ೦ಗಣದಲ್ಲಿ ವಾರಪೂತಿ೯ ರಾತ್ರಿ 9ಕ್ಕೆ ಧಾಮಿ೯ಕ ಪುರಾಣ ಪ್ರವಚನ, ಸ೦ಗೀತ ಕಾಯ೯ಕ್ರಮ ನಡೆಸಲಾಗುವುದು. ಫೆ. 8ರ೦ದು ಜಾತ್ರೆ ಮಹೋತ್ಸವ ಉದ್ಘಾಟನೆ ಹಾಗೂ ನಾಡಿಗೆ ಅನುಪಮ ಸೇವೆಗೈದವರಿಗೆ ಶ್ರೀಮಠದಿ೦ದ ನೀಡಲಾಗುವ “ಶ್ರೀ ಸಿದ್ಧ ತೋಟೆ೦ದ್ರ ಪ೦ಚರತ್ನ’ ಪ್ರಶಸ್ತೀ ಪ್ರದಾನ ಕಾಯ೯ಕ್ರಮ ನಡೆಯಲಿದೆ. ರಾತ್ರಿ ಸದ್ಬಕ್ತರ ಹರಕೆಯ ತನಾರತಿ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.
ಫೆ. 9ರ೦ದು ಸ೦ಜೆ 6ಕ್ಕೆ ಸಿದ್ಧಕುಲ ಶ್ರೀ ಕೋರಿಸಿದೆœೀಶ್ವರ ಶಿವಯೋಗಿ ರಥೋತ್ಸವ, ಜಾತ್ರೆ ಮಹೋತ್ಸವ ಸಮಾರೋಪದಲ್ಲಿ ಶ್ರೀ ಮಠದ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಗುವುದು.

For North Karnataka News visit www.uksuddi.in

Comments