ಪಾಟೀಲ ಪುಟ್ಟಪ್ಪನ ವರಿಗೆ ಕರ್ನಾಟಕ ರತ್ನ ನೀಡಿ
ಸಂಕೇಶ್ವರ: ಕನ್ನಡ ನಾಡು, ನುಡಿ, ನೆಲ, ಜಲ, ಗಡಿ ಮುಂತಾದ ವಿಷಯಗಳ ಬಗೆಗೆ ಅಪಾರ ಆಸಕ್ತಿ ತಾಳಿ ತಮ್ಮ ಬದು ಕಿನುದ್ದಕ್ಕೂ ಹೋರಾಟ ಮಾಡಿಕೊಂಡೆ ಬಂದ ಹುಬ್ಬಳ್ಳಿಯ ಪಾಟೀಲ ಪುಟ್ಟಪ್ಪನ ವರಿಗೆ ರಾಜ್ಯ ಸರ್ಕಾರವು ಕರ್ನಾಟಕ ರತ್ನ ಪ್ರಶಸ್ತಿಯನ್ನು ಕೊಡಬೇಕು ಎಂದು ಇಲ್ಲಿನ ವಿವಿಧ ಕನ್ನಡಪರ ಸಂಘಟನೆಗಳು ಒತ್ತಾಯಿಸಿವೆ.
ಈ ಕುರಿತು ಇಲ್ಲಿನ ಉಪ–ತಹಶೀ ಲ್ದಾರ ಪಿ.ಎಂ.ಕಳ್ಳೊಳ್ಳಿ ಅವರ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿರುವ ಸಂಘಟನೆಗಳು, ಕನ್ನಡಕ್ಕಾಗಿ ಹಗಲಿರಳು ಶ್ರಮಿಸುವ, ಎಂಥ ಕಠಿಣ ಸಮಸ್ಯೆ ಬಂದರೂ ಅದಕ್ಕೆ ಸಿಂಹ ಸ್ವಪ್ನ ರಾಗಿ ನಿಂತಿರುವ ಪಾಟೀಲ ಪುಟ್ಟಪ್ಪನ ವರ ಋಣವನ್ನು ರಾಜ್ಯವು ತೀರಿಸ ಬೇಕಾಗಿದೆ. ಉತ್ತರ ಕರ್ನಾಟಕದ ಪ್ರತ್ಯೇ ಕತೆ ಕೂಗುಕೇಳಿ ಬಂದಾಗಲೆಲ್ಲ ಅದನ್ನು ವಿರೋಧಿಸಿ ಕರ್ನಾಟಕದ ಅಖಂಡತೆ ಎತ್ತಿ ಹಿಡಿದಿರುವ ಪಾಟೀಲ ಪುಟ್ಟಪ್ಪ ನವರು ಈಗ ಸಂಧ್ಯಾ ಕಾಲದಲ್ಲಿದ್ದು ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡ ಬೇಕು ಎಂದು ಮನವಿಯಲ್ಲಿ ಒತ್ತಾಯಿ ಸಲಾಗಿದೆ.