UK Suddi
The news is by your side.

ಜಿಲ್ಲಾ ಪಂಚಾಯಿತಿ ಕಣದಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌

ಯಾದಗಿರಿ: ಸಾಮಾನ್ಯ ಮಹಿಳೆಗೆ ಮೀಸಲಾಗಿರುವ ತಾಲ್ಲೂಕಿನ ಪುಟಪಾಕ್ ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಸಾಫ್ಟ್‌ವೇರ್‌ ಎಂಜಿನಿಯರ್‌ ದೀಪಿಕಾರಾಣಿ ಚುಕ್ಕಪ್ಪ ನಾಯಕ ಚಪೇಟ್ಲಾ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ಸೋಮವಾರ ಅವರು ಇಲ್ಲಿಯ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. 22 ವರ್ಷ ವಯಸ್ಸಿನ ದೀಪಿಕಾರಾಣಿ, ಬಿಇ ಪದವೀಧರರಾಗಿದ್ದು, ಹೈದರಾಬಾದ್‌ನ ಖಾಸಗಿ ಕಂಪೆನಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದರು.

ತಂದೆ ಹಾಗೂ ಪಕ್ಷದ ಮುಖಂಡರ ಸಲಹೆಯಂತೆ ಉದ್ಯೋಗ ತೊರೆದು, ಚುನಾವಣೆಗೆ ಸ್ಪರ್ಧಿಸಿದ್ದಾರೆ. ನಾಮಪತ್ರ ಸಲ್ಲಿಸಿರುವವರ ಪೈಕಿ ಇವರು ಅತ್ಯಂತ ಕಿರಿಯ ಅಭ್ಯರ್ಥಿಯಾಗಿದ್ದಾರೆ.

For North Karnataka News visit www.uksuddi.in

Comments