UK Suddi
The news is by your side.

ನಾಲ್ಕನೇ ಪ್ರಶಸ್ತಿಯತ್ತ ಭಾರತ

ಭಾರತದ ‘ಯುವ ಬಳಗ’ ಐದನೇ ಸಲ ಐಸಿಸಿ 19 ವರ್ಷದೊಳಗಿನವರ ವಿಶ್ವಕಪ್‌ ಕ್ರಿಕೆಟ್ ಟೂರ್ನಿಯ ಫೈನಲ್‌ಗೆ  ಪ್ರವೇಶಿಸಿದೆ.

ಮಂಗಳವಾರ ನಡೆದ ಸೆಮಿಫೈನಲ್‌ ನಲ್ಲಿ ಅನಮೋಲ್ ಪ್ರೀತ್ ಸಿಂಗ್ (72; 92ಎಸೆತ) ಮತ್ತು ಸರ್ಫರಾಜ್ ಖಾನ್ (59; 71ಎಸೆತ) ಇಬ್ಬರ ಅರ್ಧಶತಕಗಳ ನೆರವಿನಿಂದ ಭಾರತ ತಂಡವು 97 ರನ್‌ಗಳಿಂದ ಶ್ರೀಲಂಕಾ ತಂಡದ ವಿರುದ್ಧ ಗೆದ್ದಿತು.

ಟಾಸ್ ಗೆದ್ದ ಶ್ರೀಲಂಕಾ ತಂಡವು ಭಾರತಕ್ಕೆ ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. 50 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 267 ರನ್‌ಗಳನ್ನು ಗಳಿಸಿತು. ಶ್ರೀಲಂಕಾ ತಂಡವು 42.4 ಓವರ್‌ಗಳಲ್ಲಿ 170 ರನ್ ಗಳಿಸಿ ಸರ್ವ ಪತನ ಕಂಡಿತು. ಆವೇಶ್ ಖಾನ್ (41ಕ್ಕೆ2) ಮತ್ತು ಮಯಂಕ್ ಡಾಗರ್ (21ಕ್ಕೆ3) ಅವರ ಉತ್ತಮ ಬೌಲಿಂಗ್ ಮುಂದೆ ಶ್ರೀಲಂಕಾ ತಂಡಕ್ಕೆಗುರಿ ಮುಟ್ಟಲು ಸಾಧ್ಯವಾಗಲಿಲ್ಲ.  ಮೂರು ಬಾರಿ ವಿಶ್ವ ಚಾಂಪಿಯನ್ ಆಗಿರುವ ಭಾರತ ತಂಡವು ಇದೀಗ ನಾಲ್ಕನೇ ಬಾರಿ ಪ್ರಶಸ್ತಿಯ ಸನಿಹ ಬಂದು ನಿಂತಿದೆ.

For North Karnataka News visit www.uksuddi.in

Comments