UK Suddi
The news is by your side.

ಭಾರತವನ್ನು ಸೋಲಿಸಿ ಕಿರಿಯರ ವಿಶ್ವಕಪ್‌ ಜಯಿಸಿದ ವಿಂಡೀಸ್‌

ಮೀರ್ಪುರ: ವೆಸ್ಟ್‌ ಇಂಡೀಸ್‌ ಕಿರಿಯರ ಕ್ರಿಕೆಟ್‌ ತಂಡ ಭಾನುವಾರ ನಡೆದ ಅಂಡರ್‌ -19 ವಿಶ್ವಕಪ್‌ ಪಂದ್ಯಾವಳಿಯ ಫ‌ುನಲ್‌ನಲ್ಲಿ ಭಾರತಕಿರಿಯರ ತಂಡದೆದುರು 5 ವಿಕೆಟ್‌ಗಳ ಜಯ ಸಾಧಿಸಿ ಕಪ್‌ ಜಯಿಸಿ ಸಂಭ್ರಮಿಸಿದೆ.

ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ ವೆಸ್ಟ್‌ ಇಂಡೀಸ್‌ ತಂಡದ ಬಿಗು ದಾಳಿಗೆ ನಲುಗಿ 45.1 ಓವರ್‌ಗಳಲ್ಲಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ಪೆವಿಲಿಯನ್‌ ಪರೇಡ್‌ ನಡೆಸಿತು. ಅಂತಿಮವಾಗಿ  145 ರನ್‌ ಗಳಿಸಿ ವಿಂಡೀಸ್‌ಗೆ 146 ರನ್‌ಗಳ ಅಲ್ಪ ಮೊತ್ತವನ್ನು ಗೆಲುವಿನ ಗುರಿಯಾಗಿ ನೀಡಿತು.

ಗುರಿ ಬೆನ್ನಟ್ಟಿದ ವಿಂಡೀಸ್‌ 49.3 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 146 ರನ್‌ ಗಳಿಸಿ ಸಂಭ್ರಮಿಸಿತು.

For North Karnataka News visit www.uksuddi.in

Comments