UK Suddi
The news is by your side.

ಇಂದು ಯೋಧ ಸಹದೇವ ಅಂತ್ಯಕ್ರಿಯೆ

ವಿಜಯಪುರ: ಜಮ್ಮು-ಕಾಶ್ಮೀರದ ಕುಪ್ವಾರದಲ್ಲಿ ಉಗ್ರರ ಜತೆ ನಡೆದ ಗುಂಡಿನ ಚಕಮಕಿಯಲ್ಲಿ ಶನಿವಾರ ಹುತಾತ್ಮರಾದ ಇಂಡಿ ತಾಲ್ಲೂಕಿನ ಸಹದೇವ ಮೋರೆ (26) ಅವರ ಅಂತ್ಯಕ್ರಿಯೆ  ಹುಟ್ಟೂರು ಸಾವಳಸಂಗದಲ್ಲಿ ಸೋಮವಾರ ಮಧ್ಯಾಹ್ನ ನಡೆಯಲಿದೆ.

ಬೆಳಗಾವಿಯಿಂದ ಭಾನುವಾರ ಸೇನಾ ಹೆಲಿಕಾಪ್ಟರ್‌ನಲ್ಲಿ ವಿಜಯಪುರದ ಸೈನಿಕ ಶಾಲೆ ಹೆಲಿಪ್ಯಾಡ್‌ಗೆ ತಂದ ಯೋಧನ ಮೃತದೇಹವನ್ನು ಜಿಲ್ಲಾಧಿಕಾರಿ ಡಿ.ರಂದೀಪ್ ಬರಮಾಡಿಕೊಂಡರು. ಪಾರ್ಥಿವ ಶರೀರಕ್ಕೆ ಕುಟುಂಬ ವರ್ಗದವರು, ಜಿಲ್ಲಾಡಳಿತ ಸೇರಿದಂತೆ ಗಣ್ಯರು, ಸಾರ್ವಜನಿಕರು ಭಾವಪೂರ್ಣ ನಮನ ಸಲ್ಲಿಸಿದರು.

For North Karnataka News visit www.uksuddi.in

Comments