ನಮ್ಮ ದೇಶ ಎತ್ತ ಸಾಗ್ತಿದೆ..?
ದೇಶದ ಯುವಕರಲ್ಲಿ ದರಿದ್ರ ಎಡಪಂಥೀಯರು ದೇಶ ವಿರೋಧಿ ನಿಲವನ್ನು ಬಿತ್ತಿ ರಾಷ್ಟ್ರೀಯವಾದದಿಂದ ದೂರ ಕರೆದೊಯ್ಯುತ್ತಿರುವುದನ್ನು ನೋಡಿದರೆ ಈ ಕಮ್ಯೂನಿಸ್ಟರ ಭವಿಷ್ಯ ಭಾರತದ ಕಲ್ಪನೆ ಏನೂ ಎಂಬುದನ್ನು ತಳಿಯುವ ತವಕ ಹೆಚ್ಚಾಗ್ತಿದೆ. ರಾಷ್ಟ್ರ ಮೊದಲು ಎಂಬುದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಉವಾಚವಾದರೆ ದೇಶದ ವಿಭಜನೆಗೆ ನಿಂತ ಈ ಎಡಪಂಥೀಯರ ಮಾನಸಿಕ ಸ್ಥಿತಿ ದೇಶದ ಜನಕ್ಕೆ ಇನ್ನೂವರೆಗೂ ಅರ್ಥವಾಗತ್ತಿಲ್ಲ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ದೇಶದ ವಿರುದ್ಧ ಘೋಷಣೆ ಹಾಕಿದ್ದಾರೆ ಎಂದು ದೂರಿರುವ ಕಮ್ಯೂನಿಸ್ಟ್ ವಿದ್ಯಾರ್ಥಿ ಸಂಘಟನೆ SFi ಗೆ ಭಾರತ ಚೀನಾ ಯುದ್ಧದಲ್ಲಿ ದೇಶದಲ್ಲಿ ಹಣ ಸಂಗ್ರಹಿಸಿ ಚೀನಾ ದೇಶದ ಸೈನಿಕರಿಗೆ ನೀಡಿದ ಅವರ ಇತಿಹಾಸವನ್ನು ಮರೆತಂತಿದೆ. ನಾನು ಕೂಡಾ ABVP ಅಲ್ಲಿ ಬೆಳೆದ ಯುವಕ ನನ್ನ ಸಂಘಟನೆ ದಿನಂಪ್ರತಿ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಮನೋಭಲ ಹೆಚ್ಚಿಸುವುದರ ಜೊತೆಗೆ ರಾಷ್ಟ್ರೀಯವಾದ ಚಿಂತನೆಗಳನ್ನು ಬಿತ್ತುವ ಮೂಲಕ ಅನೇಕ ರಾಷ್ಟ್ರ ಭಕ್ತರನ್ನು ಹುಟ್ಟಿ ಹಾಕಿದ ಸಂಘಟನೆ. ಕಷ್ಮೀರದಲ್ಲಿ ಉಗ್ರರ ಸವಾಲನ್ನು ಎದುರಿಸಿ ತಮ್ನ ಜೀವದ ಹಂಗನ್ನು ತೊರೆದು ರಾಷ್ಟ್ರ ಧ್ವಜವನ್ನು ಹಾರಿಸಿದ ವಿದ್ಯಾರ್ಥಿ ಸಂಘಟನೆ ಮೇಲೆ ದೇಶ ವಿರೋಧದ ಆಪಾದನೆಯನ್ನು ಮಾಡುವ ಇವರಿಗೆ ತನ್ನ ತಂದೆಯ ಅರಿವಿಲ್ಲದ ಹಾಗೆ ಭಾಸವಾಗುತ್ತಿದೆ. ದೇಶಕ್ಕೆ ಅಗೌರವ ತೋರಿಸುವ ಹೇಡಿಯ ಮಾನಸಿಕತೆಯ ಕಮ್ಯೂನಿಸ್ಟ್ ಹಾಗೂ ಕಾಂಗ್ರೆಸ್ ಗೆ ಬುದ್ಧಿ ಕಲಿಸುವರಾರು. ನಮ್ಮವರೆ ಅವರನ್ನು ಬಿಗಿಯಾಗಿ ತಬ್ಬಿಕೊಳ್ಳುವುದರ ಜೊತೆಗೆ ಅವರೊಟ್ಟಿಗೆ ದೇಶ ವಿರೋಧಿ ಘೋಷಣೆಗಳನ್ನ ಹಾಕುತ್ತಿರುವುದನ್ನು ನೋಡಿದರೆ ಮತ್ತೊಮ್ಮೆ ವೀರ ಸಾವರ್ಕರ್ ಅವರ ಅವಶ್ಯಕತೆ ಈ ದೇಶಕ್ಕೆ ಇದೆ ಎಂದು ಅನಿಸುತ್ತದೆ.
ವಿಶ್ವ ಗುರು ಭಾರತದ ಕನಸು ಹೊತ್ತ ದೇಶದ ಜನತೆ ತಲೆ ತಗ್ಗಿಸುವಂತ ಕೆಲಸದಲ್ಲಿ ನಿರತವಾದ ದೇಶ ವಿರೋಧಿಗಳಿಗೆ ಪಾಠ ಕಲಿಸುವರಾರು ಎಂಬ ಪ್ರಶ್ನೆಯೊಂದಿಗೆ ನನ್ನ ಭವಿಷ್ಯದ ಜೀವನವನ್ನು ದೇಶಕ್ಕಾಗಿ ಸವಿಸುವ ಪ್ರಮಾಣದೊಂದಿಗೆ ಭಾರತ ಮಾತಾ ಕಿ ಜೈ…
ಪ್ರದೀಪ ಮುಳ್ಳೂರ.