UK Suddi
The news is by your side.

ಭಾರತೀಯ ಸೇನೆಗೆ 6 ಮುಧೋಳ ನಾಯಿ

 

ವೀರಯೋಧ ಹನಮಂತಪ್ಪ ಕೊಪ್ಪದ ಸ್ಮರಣಾರ್ಥ ಕಾರ್ಯ

ಇತ್ತೀಚೆಗೆ ವೀರಮರಣವನ್ನಪ್ಪಿದ ಹನಮಂತಪ್ಪನನ್ನು ಹುಡುಕಲು ಸಹಾಯಕವಾಗಿದ್ದು ಸ್ನಿಪ್ಪರ್ ಡಾಗ್ ಎಂಬುದು ವಿಶೇಷ. ಅದೇ ರೀತಿ ಬೇಟೆಗೆ ಹೆಸರಾದ ಮುಧೋಳ ಹೌಂಡ್ ತಳಿಯ ನಾಯಿ ತನ್ನದೇ ಇತಿಹಾಸ ಹೊಂದಿದೆ. ಈಗ ಮುಧೋಳ ಹೌಂಡ್ 6 ಶ್ವಾನಗಳನ್ನು ಭಾರತೀಯ ಸೇನೆಗೆ ಹಸ್ತಾಂತರಿಸಲಾಗಿದೆ. ಆ ಮೂಲಕ ಭಾರತೀಯ ಸೇನಾ ಸದಸ್ಯನಾಗಿ ದೇಶಿಯ ಶ್ವಾನಗಳು ಗುರುತಿಸಿಕೊಂಡಿವೆ.ಈವರೆಗೆ ವಿದೇಶಿ ನಾಯಿಗಳನ್ನು ಮಾತ್ರ ಸೇನೆಯಲ್ಲಿ ಬಳಸಲಾಗುತ್ತಿತ್ತು. ಆದರೆ ದೇಶಿಯ ಕರ್ನಾಟಕದ ಬಾಗಲಕೋಟೆಯ ಮುಧೋಳದ ಸಪುರ ದೇಹ, ಮಿಂಚಿನ ಓಟದ ಮೂಲಕ ಎದುರಾಳಿಯನ್ನು ಸದೆಬಡಿಯುವ ಹೌಂಡ್ ಶ್ವಾನ ಭಾರತೀಯ ಸೇನೆಗೆ ಸೇರಿ ಬೇಟೆಗೆ ಸನ್ನದ್ಧವಾಗಲಿದೆ. ಭಾರತೀಯ ಸೇನೆ ಯುದ್ಧರಂಗಕ್ಕೆ ಬಳಸಿಕೊಳ್ಳಲು ಮುಧೋಳದ ಶ್ವಾನ ಸಂಶೋಧನಾ ಕೇಂದ್ರದೊಂದಿಗೆ ಒಪ್ಪಂದವನ್ನೂ ಮಾಡಿಕೊಂಡಿದೆ. ಆ ಪ್ರಕಾರ 6 ನಾಯಿಗಳನ್ನು ಹಸ್ತಾಂತರಿಸಲಾಗಿದೆ.

ಹಸ್ತಾಂತರ: ಕರ್ನಾಟಕ ಪಶು ವೈದ್ಯಕೀಯ ವಿವಿಯ ಅಧಿ ನದ ಮುಧೋಳದ ಶ್ವಾನ ಸಂಶೋಧನಾ ಕೇಂದ್ರದೇಶಿ ಶ್ವಾನ ತಳಿ ಅಭಿವೃದ್ಧಿ ಮತ್ತು ಬೆಳವಣಿಗೆಗೆ ಸಾಕಷ್ಟು ಕೊಡುಗೆ ನೀಡಿದೆ. ಅದರಂತೆ ಮುಧೋಳ ನಾಯಿ ಸಂರಕ್ಷಣೆ, ಸಂಶೋಧನೆಯಲ್ಲಿ ತೊಡಗಿದೆ. ಈ ಕೇಂದ್ರದಲ್ಲಿ ಬೆಳೆದ ಆರು ನಾಯಿ ಗಳನ್ನು ಬೆಂಗಳೂರಿನ ಹೆಬ್ಬಾಳದಲ್ಲಿ ಹಸ್ತಾಂತರಿಸಲಾಯಿತು. ವಿಶೇಷವೆಂದರೆ ಸಿಯಾಚಿನ್ ವೀರಯೋಧ ಬೆಟದೂರ ಹುಲಿ ಹನಮಂತಪ್ಪ ಅವರ ಸ್ಮರಣಾರ್ಥ ಈ ಶ್ವಾನಗಳನ್ನು ಸೇನೆಗೆ ಹಸ್ತಾಂತರಿಸಲಾಗಿದೆ.ಇಂಡಸ್ ವ್ಯಾಲೆ ನಾಗರಿಕತೆಯ ಕುರುಹುಗಳ ನಗರಿ ಖ್ಯಾತಿ ಹೊಂದಿರುವ ಉತ್ತರಪ್ರದೇಶದ ಮೀರತ್‌ನಲ್ಲಿ ಸೇನೆ ಯುದ್ಧ ಶ್ವಾನಗಳ ತರಬೇತಿ ಕೇಂದ್ರ ಹೊಂದಿದೆ. ಕೇಂದ್ರದ ಅಧಿ ಕಾರಿಗಳಿಗೆ ವಿವಿಯ ಡೀನ್ ಡಾ. ಯತಿರಾಜ್, ಸಂಶೋಧನಾ ಸಹ ನಿರ್ದೇಶಕ ಡಾ. ಬಸವರಾಜ ಹಾಗೂ ಮುಧೋಳ ಶ್ವಾನ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ಮಹೇಶ ದೊಡಮನಿ ಅವರು ಆರು ಶ್ವಾನಗಳನ್ನು ಹಸ್ತಾಂತರಿಸಿದರು.ಭಾರತೀಯ ಸೇನೆಯ ಪರವಾಗಿ ಲೆಫಿನೆಂಟ್ ಜರ್ನಲ್ ಪ್ರಕಾಶ ಎನ್. ಶ್ವಾನ ಸ್ವೀಕರಿಸಿ, ಶ್ವಾನಗಳನ್ನು ಸೈನ್ಯದ ಚಟುವಟಿಕೆಗಳಿಗೆ ತರಬೇತಿ ನೀಡಿ ಬಳಸಲಾಗುವುದು ಎಂದು ತಿಳಿಸಿದ್ದಾರೆ.ಕೇಂದ್ರದಲ್ಲಿ ಶ್ವಾನಗಳಿಗೆ ಬಾಂಬ್ ಪತ್ತೆ ಹಚ್ಚುವಿಕೆ, ಪಹರೆ ಚಟುವಟಿಕೆ, ರಕ್ಷಣೆ ನೀಡುವ ಕುರಿತು ತರಬೇತಿ ನೀಡಲಾಗುತ್ತದೆ. ಸಾಮಾನ್ಯವಾಗಿ ಭಾರತೀಯ ಸೇನೆಯಲ್ಲಿ ಈ ವರೆಗೆ ಲ್ಯಾಬ್ರಡಾರ್, ಜರ್ಮನ್ ಶ-ರ್ಡ, ಬೇಲ್ಜಿಯಂ ಶ-ರ್ಡ ಶ್ವಾನ ತಳಿಗಳನ್ನು ಬಳಸಲಾಗುತ್ತಿತ್ತು. ಆದರೆ ಈಗ ದೇಶಿ ತಳಿ ಸೇರ್ಪಡೆಯಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.

For North Karnataka News visit www.uksuddi.in

Comments