UK Suddi
The news is by your side.

ಏನೀ ಘನಘೋರ ವಿಪರ್ಯಾಸ ! ಕವಿತೆ – ಉಮೇಶ ಬೆಳಕೂಡ

ಏನೀ ಘನಘೋರ ವಿಪರ್ಯಾಸ !

ಏನಿದೇನಿದು ಘನಘೋರ
ವಿಪರ್ಯಾಸ
ಸ್ವಂತ ಅಪ್ಪನ ಎದುರು ನಿಂತು
ನೆರೆಯವನ ಅಪ್ಪ ಎನ್ನುವ
ಪರಿಹಾಸ!

ರಾಷ್ಟ್ರವೆಂದರೆ ಇವರಿಗೆ ವೈರಿ!
ರಾಷ್ಟ್ರಧ್ವಜ ಎಂದರೆ ಉರಿ!
ಇವರಿಗೆ ಬೇಕು ಇಲ್ಲಿಯ ಅನ್ನ
ಹಾಕುವರು ಮಾತ್ರ ಇಲ್ಲಿಯೇ ಕನ್ನ!

ಭಾರತದ ನೆಲದಲ್ಲಿ ನಿಂತು ಹೇಳುವರು
“ಗೋ ಬ್ಯಾಕ್ ಇಂಡಿಯಾ”
ಅರೆ! ನೀ ಏನು ಪಾಕ್ ನಿಂದ, ಚೀನಾದಿಂದ ಬಂದೆಯಾ?

ಎಲೆ ದ್ರೋಹಿ, ಮನುಜನಾಗಿ ಹುಟ್ಟಿದ್ದೀಯಾ
ಋಣದ ಮಾತಾಡು.
ತಾಯಿ,ತಂದೆ,ಗುರು,ದೇಶ
ಹುಟ್ಟಿದ ಊರು, ಬೆಳೆಸಿದ ಸಮಾಜ
ಈ ಆರರ ಋಣ ನಿನ್ನ ಮೇಲಿದೆ
ನೆನಪಿರಲಿ.
ಎಂಜಲು ಕಾಸಿಗೆ ಹಡೆದವ್ವನ
ಮಾರುವ ಗುಣ
ನಿನಗೆ ಬಾರದಿರಲಿ.

~ ಉಮೇಶ ಬೆಳಕೂಡ

For North Karnataka News visit www.uksuddi.in

Comments