ಪಾಕ್ ವಿರುದ್ಧ ಭಾರತಕ್ಕೆ ಸುಲಭ ಜಯ
ಮಿರ್ಪುರ; ಉಪನಾಯಕ ವಿರಾಟ್ ಕೊಹ್ಲಿ ಅವರ ಆಕರ್ಷಕ ಬ್ಯಾಟಿಂಗ್ ಮತ್ತು ಭಾರತೀಯ ಬೌಲರ್ಗಳ ಸಂಘಟಿತ ಪ್ರಯತ್ನದಿಂದಾಗಿ ಶನಿವಾರ ಇಲ್ಲಿ ನಡೆದ ಏಷ್ಯಾ ಕಪ್ ಟೂರ್ನಿಯ ಪಂದ್ಯದಲ್ಲಿ ಭಾರತ ಪಾಕಿಸ್ತಾನವನ್ನು ಐದು ವಿಕೆಟ್ಗಳಿಂದ ಸುಲಭವಾಗಿ ಮಣಿಸಿತು.
84ರನ್ಗಳ ಸುಲಭ ಗುರಿ ಬೆನ್ನತ್ತಿದ ಭಾರತ ಆರಂಭದಲ್ಲಿಯೇ ಮುಗ್ಗರಿಸಿತು. ಮೊದಲ ಓವರ್ನಲ್ಲಿಯೇ ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಅಜಿಂಕ್ಯಾ ರಹಾನೆ ವಿಕೆಟ್ ಕಳೆದುಕೊಂಡಿತು. ಬೆನ್ನಲ್ಲಿಯೇ ಸುರೇಶ್ ರೈನಾ ಸಹ ನಿರ್ಗಮಿಸಿದರು. ನಂತರ ವಿರಾಟ್ ಕೊಹ್ಲಿ(49) ಮತ್ತು ಯುವರಾಜ್ ಸಿಂಗ್ (ಅಜೇಯ14) ಉತ್ತಮ ಜತೆಯಾಟದ ಮೂಲಕ ತಂಡವನ್ನು ಗೆಲವಿನತ್ತ ಕೊಂಡೊಯ್ದರು. ಅಂತಿಮವಾಗಿ 15.3 ಓವರ್ಗಳಲ್ಲಿ ಐದು ವಿಕೆಟ್ ಕಳೆದುಕೊಂಡು ಸುಲಭ ಜಯ ದಾಖಲಿಸಿತು.