UK Suddi
The news is by your side.

ಹಲಸಂಗಿ ಗೆಳೆಯರ ಪ್ರತಿಷ್ಠಾನ ಪ್ರಶಸ್ತಿ ಪ್ರಕಟ

ವಿಜಯಪುರ: ಇಂಡಿ ತಾಲ್ಲೂಕು ಹಲಸಂಗಿ ಗೆಳೆಯರ ಪ್ರತಿಷ್ಠಾನದ 2015ನೇ ಸಾಲಿನ ರಾಜ್ಯ ಮಟ್ಟದ ಪ್ರಶಸ್ತಿಗೆ ಕಾವ್ಯ, ವಿಮರ್ಶೆ, ಜಾನಪದ ಕ್ಷೇತ್ರದ ಮೂವರು ದಿಗ್ಗಜರನ್ನು ಆಯ್ಕೆ ಮಾಡಲಾಗಿದೆ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾಧಿಕಾರಿ ಡಿ.ರಂದೀಪ್ ಹೇಳಿದ್ದಾರೆ.

ಕಾವ್ಯ ವಿಭಾಗದಿಂದ ಶಿವಮೊಗ್ಗದ ಕವಯತ್ರಿ ಸವಿತಾ ನಾಗಭೂಷಣ, ಸಂಶೋಧನೆ ಮತ್ತು ವಿಮರ್ಶೆ ವಿಭಾಗದಲ್ಲಿ ಹುಬ್ಬಳ್ಳಿಯ ಡಾ. ಬಿ.ವಿ.ಶಿರೂರ, ಜಾನಪದ ವಿಭಾಗದಲ್ಲಿ ಮೈಸೂರಿನ ಡಾ.ಕೃಷ್ಣಮೂರ್ತಿ ಹನೂರ ಪ್ರಶಸ್ತಿಗೆ ಭಾಜನರಾಗಿದ್ದಾರೆ.

For North Karnataka News visit www.uksuddi.in

Comments