UK Suddi
The news is by your side.

ಫಾಮ೯ರ್ ಫೆಲೋವ ಪ್ರಶಸ್ತೀ ಪಡೆದ ರಾಜ್ಯದ ಏಕೈಕ ರೈತ

ಕೃಷಿಯಲ್ಲಿ ಸ೦ಶೋಧನೆ, ತ೦ತ್ರಜ್ಞಾನ, ಹೊಸ ಆವಿಷ್ಕಾರಗಳ ಪರಿಚಯ ಮತ್ತು ಅದರ ಪ್ರಸರಣ ಕಾಯ೯ ಗುರುತಿಸಿ ಕೇ೦ದ್ರ ಸರಕಾರ ಭಾರತೀಯ ಕೃಷಿ ಸ೦ಶೋಧನಾ ಸ೦ಸ್ಥೆ ನೀಡುವ ಐಎಆರ್‍ಐ- ಮಾಡಲ್ ಫಾಮ೯ರ್ ಫೆಲೋವ್ ಅವಾಡ್‍೯ ಪ್ರಶಸ್ತೀಗೆ ಜಿಲ್ಲೆಯ ರೈತ ಆಯ್ಕೆಗೊ೦ಡಿದ್ದಾರೆ.

ರಾಷ್ಟ್ರಮಟ್ಟದಲ್ಲಿ ಈ ಬಾರಿ ಪ್ರಶಸ್ತೀಗೆ ನಾಲ್ಕು ಮ೦ದಿ ಆಯ್ಕೆಯಾಗಿದ್ದಾರೆ. ಅದರಲ್ಲಿ ಕನಾ೯ಟಕದ ಏಕೈಕ ರೈತ ಬಾಗಲಕೋಟೆ ಜಿಲ್ಲೆಯ ಜಮಖ೦ಡಿ ತಾಲೂಕಿನ ಧರೆಪ್ಪ ಪರಪ್ಪ ಕಿತ್ತೂರ ಒಬ್ಬರಾಗಿದ್ದಾರೆ. ಇನ್ನುಳಿದವರು ಪ೦ಜಾ ಬ್, ಉತ್ತರಪ್ರದೇಶ ಮತ್ತು ಬಿಹಾರದ ರೈತರು ಆಯ್ಕೆಯಾಗಿದ್ದಾರೆ. ಈ ಪ್ರಶಸ್ತೀಗೆ ಆಯ್ಕೆಯಾದ ರೈತರು ಭಾರತೀಯ ಕೃಷಿ ಸ೦ಶೋಧನಾ ಸ೦ಸ್ಥೆಯಲ್ಲಿ ಅಧ್ಯಯನ ಮಾಡುವ ಕೃಷಿ ತಜ್ಞರಿಗೆ ಪಾಠ ಹೇಳುವ ಅತಿಥಿಯಾಗಲಿದ್ದಾರೆ. ನವದೆಹಲಿಯಲ್ಲಿ ಮಾ. 19ರಿ೦ದ 21ರವರೆಗೆ ನಡೆಯಲಿರುವ ರಾಷ್ಟ್ರೀಯ ಕೃಷಿ ಮೇಳ ಕೃಷಿ ಉನ್ನತಿ ಮೇಳದಲ್ಲಿ ಪ್ರಧಾನಿ ನರೇ೦ದ್ರ ಮೋದಿ ಹಾಗೂ ಕೇ೦ದ್ರ ಕೃಷಿ ಸಚಿವ ರಾಧಾ ಮೋಹನ ಸಿ೦ಗ್ ಅವರು ಪ್ರಶಸ್ತೀಯನ್ನು ನೀಡಲಿದ್ದಾರೆ.

ರೈತನ ಸಾಧನೆಗಳು: ಧರೆಪ್ಪ ಅವರು ಒಟ್ಟು 18 ಎಕರೆ ನೀರಾವರಿ ಭೂಮಿಯಲ್ಲಿ 24 ವಷ೯ಗಳಿ೦ದ ಸಾವಯವ ಕೃಷಿಯಲ್ಲಿ ತೊಡಗಿದ್ದಾರೆ. ಕೃಷಿ, ತೋಟಗಾರಿಕೆ, ಹ್ಯೆನುಗಾರಿಕೆ, ಅರಣ್ಯ ಕೃಷಿ, ವಾಣಿಜ್ಯ ಕೃಷಿ ಒಳಗೊ೦ಡ೦ತೆ ವಿವಿಧ ಕೃಷಿ ಪಾಲನೆ ಮತ್ತು ಸ೦ಶೋಧನೆಗಳಲ್ಲಿ ತೊಡಗಿದ್ದಾರೆ. ವಿಶೇಷವಾಗಿ ಹನಿ ನೀರಾವರಿ, ನೇರ ಮಾರುಕಟ್ಟೆ, ಬೆಳೆಗಳಿಗೆ ವಿವಿಧ ಸ೦ಗೀತ ಕೇಳಿಸಿ ಥೆರಪಿ ನೀಡಿ ಅಧಿಕ ಇಳುವರಿ ಹಾಗೂ ರೋಗ ಮುಕ್ತಗೊಳಿಸುವುದು, ಆರು ತಿ೦ಗಳಲ್ಲಿ ಮೂರು ಎಕರೆ ಭೂಮಿಯಲ್ಲಿ ಮೂರು ಬೆಳೆ (ಕಲ್ಲ೦ಗಡಿ, ಚೆ೦ಡು ಹೂವು ಮತ್ತು ತೆ೦ಗು) ತೆಗೆದು 18 ಲಕ್ಷ ಲಾಭಾ೦ಶ ಕ೦ಡಿರುವುದು, ಬೇವಿನ ಬೀಜ ಪುಡಿ ಮಾಡಿ ಗೊಬ್ಬರ ತಯಾರಿಸುವ ಯ೦ತ್ರ ಕ೦ಡು ಹಿಡಿದಿರುವುದು, ಬೋರವೆಲ್‍ಗೆ ಸೋಲಾರ ಅಳವಡಿಸಿಕೊ೦ಡಿರುವುದು ಪ್ರಮುಖ ಸಾಧನೆಗಳಾಗಿವೆ. 

ಸ೦ದ ಪ್ರಶಸ್ತೀಗಳು: ರಾಜ್ಯ ಸರಕಾರದ ಕೃಷಿ ಪ೦ಡಿತ ಪ್ರಶಸ್ತೀ, ಅತ್ಯುತ್ತಮ ತೋಟಗಾರಿಕಾ ಕೃಷಿಕ, ಕೃಷಿ ಇಲಾಖೆಯ ಕೃಷಿ ಪ್ರಶಸ್ತೀ, ಕಾಯಕಯೋಗಿ ಪ್ರಶಸ್ತೀ, ಕನಾ೯ಟಕ ಸೇವಾ ರತ್ನ, ಕಲಾಶ್ರೀ ಪ್ರಶಸ್ತೀ ಒಳಗೊ೦ಡ೦ತೆ ಹತ್ತಾರು ಗೌರವ ಮತ್ತು ಸನ್ಮಾನಗಳು ಇವರಿಗೆ ಸ೦ದಿವೆ.

“ಪ್ರಶಸ್ತೀ ಬ೦ದಿರುವುದು ಸ೦ತಸವಾಗಿದೆ. ಇದಕ್ಕೆಲ್ಲ ಕಾರಣ ಬಾಗಲಕೋಟೆಯ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಮಹೇಶ್ವರ್ ಹಾಗೂ ತ೦ಡ ಕಾರಣ. ನಾನು ತಜ್ಞರ ಮಾಗ೯ದಶ೯ನದೊ೦ದಿಗೆ ಕೃಷಿ ಮಾಡುತ್ತೇನಷ್ಟೇ ಉಳಿದದ್ದೆಲ್ಲ ಅವರೇ ಮಾಡಿದ್ದು. ಅವರಿಗೆ ನಾನು ಋಣಿ ಮತ್ತು ಈ ಪ್ರಶಸ್ತೀಯನ್ನು ನನ್ನ ರೈತ ಸಮುದಾಯಕ್ಕೆ ಅಪಿ೯ಸುತ್ತೇನೆ. ಇನ್ನಷ್ಟು ತ೦ತ್ರಜ್ಞಾನ ಹಾಗೂ ನವೀನ ಕೃಷಿ ಪದ್ಧತಿ ಮೂಲಕ ಪ್ರಯೋಗಗಳನ್ನು ಮಾಡುತ್ತೇನೆ. 

– ಧರೆಪ್ಪ, ಪ್ರಶಸ್ತೀಗೆ ಭಾಜನರಾದ ರೈತ

 

ಪ್ರಯೋಗಗಳು

ಮಿಶ್ರ ಹಾಗೂ ಸಮಗ್ರ ಬೆಳೆಯಲ್ಲಿ ವೈಜ್ಞಾನಿಕತೆ ಅಳವಡಿಸಿ ಲಾಭಾ೦ಶ ಕ೦ಡಿರುವುದು, ಕೃಷಿ ತ್ಯಾಜ್ಯ ಪುನಬ೯ಳಕೆ, ಕೃಷಿ ಪ್ರಯೋಗ ಕುರಿತು ನೂರಾರು ಟಿವಿ ಮತ್ತು ರೇಡಿಯೋ ಕಾಯ೯ಕ್ರಮ ನೀಡಿರುವುದು ಹಾಗೂ ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿರುವುದು ಇತರ ರೈತರಿಗೆ ಅನುಕೂಲವಾಗಿದೆ. ತಾವು ಬೆಳೆದ ಬಹುತೇಕ ಬೆಳೆಗಳಿಗೆ ಮೌಲ್ಯವಧಿ೯ತ ಸ್ಪಶ೯ ನೀಡಿದ್ದಾರೆ. ಇವರು ಅಮೇರಿಕಾ ಮತ್ತು ಚೀನಾ ಪ್ರವಾಸ ಮಾಡಿದ್ದಾರೆ, ಅಲ್ಲಿಯ ರೈತರೂ ಇವರ ತೋಟಕ್ಕೆ ಭೇಟಿ ನೀಡಿದ್ದಾರೆ.

For North Karnataka News visit www.uksuddi.in

Comments