UK Suddi
The news is by your side.

ಕಲಬುರ್ಗಿ ಆಸ್ಪತ್ರೆಯಲ್ಲಿ ಬೆಂಕಿ ಅನಾಹುತ

ಕಲಬುರ್ಗಿ: ಇಲ್ಲಿಯ ಜಿಲ್ಲಾ ಆಸ್ಪತ್ರೆಯ ‘ಅವಧಿ ಪೂರ್ವ ಜನಿಸುವ ಶಿಶುಗಳ ಆರೈಕೆ ವಿಭಾಗ (ಎಸ್‌ಎನ್‌ಸಿಯು)’ದಲ್ಲಿ ಬುಧವಾರ ಮಧ್ಯಾಹ್ನ ಬೆಂಕಿ ಅನಾಹುತ ಸಂಭವಿಸಿದ್ದು, ಶುಶ್ರೂಷಕರೊಬ್ಬರ ಸಮಯ ಪ್ರಜ್ಞೆಯಿಂದ 26 ಶಿಶುಗಳು ಪ್ರಾಣಾಪಾಯದಿಂದ ಪಾರಾಗಿವೆ.

ಹೊಗೆ ವ್ಯಾಪಿಸುತ್ತಿದ್ದಂತೆ  ಬಾಣಂತಿಯರು ತಮ್ಮ ಕಂದಮ್ಮಗಳನ್ನು ಎತ್ತಿಕೊಂಡು ಆಸ್ಪತ್ರೆಯಿಂದ ಹೊರಗೆ ಓಡಿ ಬಂದ ದೃಶ್ಯ ಮನಕಲಕುವಂತಿತ್ತು. ಬರೀ ಮೈಯಲ್ಲಿದ್ದ ಕಂದಮ್ಮಗಳನ್ನು ತೊಡೆಯ ಮೇಲೆ ಹಾಕಿಕೊಂಡು, ಸೀರೆ ಸೆರಗಿನಿಂದ ಅವುಗಳ ಮೈ ಮುಚ್ಚಿ ಜಿಲ್ಲಾ ಆಸ್ಪತ್ರೆ ಬಯಲಿನಲ್ಲೇ ಕುಳಿತು ಬಾಣಂತಿಯರು ಅಳುತ್ತಿದ್ದರು. ಮುಂದೇನು ಮಾಡಬೇಕು ಎಂಬುದು ತೋಚದೆ ಅವರೆಲ್ಲ ಕಂಗಾಲಾಗಿದ್ದರು. ಕೆಲಹೊತ್ತಿನ ನಂತರ ಆ ಕಂದಮ್ಮಗಳನ್ನು ಬೇರೆಬೇರೆ ಆಸ್ಪತ್ರೆಗಳಿಗೆ ದಾಖಲಿಸಲಾಯಿತು.

For North Karnataka News visit www.uksuddi.in

Comments