UK Suddi
The news is by your side.

ಪಾಕ್:ಬಾಂಬ್ ದಾಳಿಗೆ 69 ಬಲಿ

ಲಾಹೋರ್‌ನ ಉದ್ಯಾನವೊಂದರಲ್ಲಿ ಭಾನುವಾರ ಸಂಜೆ ನಡೆದ ಪ್ರಬಲ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಮಕ್ಕಳು ಸೇರಿದಂತೆ ಕನಿಷ್ಠ 69 ಮಂದಿ ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ತಾಲಿಬಾನ್‌ನಿಂದ ವಿಭಜನೆ ಗೊಂಡಿರುವ  ‘ಜಮಾತುಲ್‌ ಅಹ್ರಾರ್‌’ ಸಂಘಟನೆ ಈ ಸ್ಫೋಟದ ಹೊಣೆಯನ್ನು ಹೊತ್ತುಕೊಂಡಿದೆ. ಪಂಜಾಬ್‌ನ ಮಾಜಿ ರಾಜ್ಯಪಾಲ ಸಲ್ಮಾನ್‌ ತಸೀರ್‌ ಹತ್ಯೆ ಸಂಬಂಧ ಕಳೆದ  ತಿಂಗಳು ಮುಮ್ತಾಜ್‌ ಖಾದ್ರಿ ಎಂಬಾತನನ್ನು ಗಲ್ಲಿಗೇರಿಸಿದ್ದಕ್ಕೆ ಈ ದಾಳಿ ನಡೆಸಲಾಗಿದೆ ಎಂದು ಅದು ತಿಳಿಸಿದೆ.

ಗುಲ್ಷನ್–ಇ– ಇಕ್ಬಾಲ್ ಉದ್ಯಾನದಲ್ಲಿ  ಈಸ್ಟರ್‌ ಹಬ್ಬಕ್ಕೆ ರಜೆ ಇದ್ದ ಕಾರಣ ಕ್ರೈಸ್ತರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ಈ  ಸಂದರ್ಭದಲ್ಲೇ ಬಾಂಬ್‌ ಸ್ಫೋಟಿಸಲಾಗಿದೆ. 20 ವರ್ಷದ ಯುವಕ ಈ ಕೃತ್ಯವೆಸಗಿದ್ದಾನೆ.

‘ಈ ದಾಳಿಗೆ 10ರಿಂದ 15 ಕೆ.ಜಿ. ಸ್ಪೋಟಕಗಳನ್ನು ಬಳಸಿಕೊಳ್ಳಲಾಗಿದೆ. ಆದರೆ, ಕ್ರೈಸ್ತರನ್ನು ಗುರಿಯಾಗಿರಿಸಿಕೊಂಡು ಈ ದಾಳಿ ನಡೆದಿಲ್ಲ’ ಎಂದು ಉಪ ಮಹಾ ನಿರೀಕ್ಷಕ ಹೈದರ್‌ ಅಶ್ರಫ್‌ ತಿಳಿಸಿದರು.

‘ಮಕ್ಕಳು ಮತ್ತು ಅಲ್ಪಸಂಖ್ಯಾತರನ್ನು ಗುರಿಯಾಗಿರಿಸಿಕೊಂಡೇ ಈ ದಾಳಿ ನಡೆಸಿರುವ ಸಾಧ್ಯತೆ ಇದೆ’ ಎಂದು ಇನ್ನೊಬ್ಬ ಹಿರಿಯ ಅಧಿಕಾರಿಗಳು ತಿಳಿಸಿದರು.

For North Karnataka News visit www.uksuddi.in

Comments