ಬ್ರಾತ್ ವೈಟ್ ಸೂಪರ್ ಫೈಟ್ : ವಿಂಡೀಸ್ ಟಿ20 ಚಾಂಪಿಯನ್ಸ್
ಕೊಲ್ಕೊತ್ತಾ: ಇಲ್ಲಿನ ಈಡನ್ ಗಾರ್ಡನ್ ಮೈದಾನ ರವಿವಾರ ಅಕ್ಷರಶ: ವೆಸ್ಟ್ ವಿಂಡೀಸ್ ಕ್ರಿಕೆಟ್ ಲೋಕಕ್ಕೆ ಅದೃಷ್ಟದ ಅಂಗಳವಾಗಿ ಪರಿಣಮಿಸಿದೆ. ಪ್ರಾರಂಭದಲ್ಲಿ ವಿಂಡೀಸ್ ಮಹಿಳಾ ತಂಡವು ಟಿ20 ವಿಶ್ವಕಪ್ ಚಾಂಪಿಯನ್ ಪಟ್ಟವನ್ನಲಂಕರಿಸಿದ ಬೆನ್ನಲ್ಲೇ ಕೆರಿಬಿಯನ್ ಮೆನ್ಸ್ ಕೂಡಾ ಕ್ರಿಕೆಟ್ ಜನಕರನ್ನು ಸೋಲಿಸಿ ಚುಟುಕು ಕ್ರಿಕೆಟಿನ ವಿಶ್ವಚಾಂಪಿಯನ್ ಪಟ್ಟವನ್ನು ದಾಖಲೆಯ ಎರಡನೇ ಬಾರಿಗೆ ಅಲಂಕರಿಸಿ ಮೆರೆದಾಡಿದರು. ಇಲ್ಲಿನ ಈಡನ್ ಗಾರ್ಡನ್ ಮೈದಾನದಲ್ಲಿ ಕೊನೆಯ ಓವರ್ನವರೆಗೆ ರೋಮಾಂಚಕವಾಗಿ ಸಾಗಿದ ಫೈನಲ್ ಪಂದ್ಯದಲ್ಲಿ ತಮ್ಮ ಸಾಂಪ್ರದಾಯಿಕ ಎದುರಾಳಿಗಳನ್ನು
4 ವಿಕೆಟ್ ಗಳಿಂದ ಮಣಿಸಿದ ಸಮ್ಮಿ ಪಡೆ ವಿಶ್ವಚಾಂಪಿಯನ್ ಗಳಾಗಿ ಮೆರೆದಾಡಿತು.