ಗಣಿತ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ – ಕಿಮ್ಮನೆ ರತ್ನಾಕರ್
ಸೋಮವಾರದಂದು ನಡೆಯಬೇಕಿದ್ದು ಎಸ್ಎಸ್ಎಲ್ಸಿ ಗಣಿತ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬುದು ಗಾಳಿಸುದ್ದಿ ವಿದ್ಯಾರ್ಥಿಗಳು, ಪೋಷಕರು ಈ ಬಗ್ಗೆ ಭಯಪಡುವ ಅಗತ್ಯವಿಲ್ಲ ಎಂದು ಪ್ರಾರ್ಥಮಿಕ ಪ್ರೌಡ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಸ್ಪಷ್ಟ ಪಡಿಸಿದ್ದಾರೆ. ಭಾನುವಾರದಂದು ನಗರದ ಸುಂಕದಕಟ್ಟೆ ಬಳಿ ಇಬ್ಬರು ವ್ಯಕ್ತಿಗಳು ಪ್ರಶ್ನೆಪತ್ರಿಕೆ ಹಿಡಿದು 20 ಸಾವಿರ ರೂ. ಗೆ ಮಾರಾಟ ಮಾಡಲು ಯತ್ನಿಸುತ್ತಿದ್ದರು, ಈ ವೇಳೆ ಸಾರ್ವಜನಿಕರೇ ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು ಎನ್ನಲಾಗಿದೆ. ವಶಕ್ಕೆ ಪಡೆದ ಶಂಕಿತ ಆರೋಪಿಗಳನ್ನು ವಿಚಾರಣೆ ನಡೆಸಿದ್ದು ಮಾರಾಟ ಮಾಡಲಾಗುತ್ತಿದ್ದದ್ದು ನಕಲಿ ಪ್ರಶ್ನೆ ಪತ್ರಿಕೆ ಎಂಬುದು ಬೆಳಕಿಗೆ ಬಂದಿದೆ, ಎಂದು ಪಶ್ಚಿಮ ವಲಯ ಡಿಸಿಪಿ ಅಜಯ್ ಹಿಲೋರಿ ಹೇಳಿದ್ದಾರೆ. ಗಣಿತ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ ವಿದ್ಯಾರ್ಥಿಗಳು ಆತಂಕ ಪಡದೆ ಪರೀಕ್ಷೆಗೆ ಹಾಜರಾಗಬಹುದು, ನಿಗದಿಯಂತೆ ಪರೀಕ್ಷೆ ನಡೆಯಲಿದ್ದು ವಿದ್ಯಾರ್ಥಿಗಳು ಪೋಷಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ಸದಾರೆ
For North Karnataka News visit www.uksuddi.in