ಅತಿ ವೇಗದ ಗತಿಮಾನ್ ರೈಲಿಗೆ ಚಾಲನೆ
ದೇಶದ ಮೊದಲ ಅತಿ ವೇಗದ ‘ಗತಿಮಾನ್ ಎಕ್ಸ್ಪ್ರೆಸ್’ ರೈಲಿಗೆ ರೈಲ್ವೆ ಸಚಿವ ಸುರೇಶ್ ಪ್ರಭು ಮಂಗಳವಾರ ಚಾಲನೆ ನೀಡಿದರು.
ಈ ರೈಲು ದೆಹಲಿ ಮತ್ತು ಆಗ್ರಾ ನಡುವೆ ಸಂಚರಿಸಲಿದೆ. ಗಂಟೆಗೆ 165 ಕಿ.ಮೀ. ವೇಗದಲ್ಲಿ ಗತಿಮಾನ್ ಎಕ್ಸ್ಪ್ರೆಸ್ ರೈಲು ಚಲಿಸಲಿದೆ.
ದೆಹಲಿ ಮತ್ತು ಆಗ್ರಾ ನಡುವಿನ 184 ಕಿ.ಮೀ. ಅಂತರವನ್ನು ಕೇವಲ 1. 45 ನಿಮಿಷಗಳಲ್ಲಿ ತಲುಪಲಿದೆ. ಈ ರೈಲಿನ ನಿರ್ಮಾಣಕ್ಕೆ ಒಟ್ಟು 50 ಕೋಟಿ ರೂಪಾಯಿ ವೆಚ್ಚವಾಗಿದೆ.
ವೈ–ಫೈ, ಪರಿಸರ ಸ್ನೇಹಿ ಶೌಚಾಲಯ ಸೇರಿದಂತೆ ಅತ್ಯಾಧುನಿಕ ಸೌಕರ್ಯಗಳು ಈ ರೈಲಿನಲ್ಲಿ ಲಭ್ಯವಿವೆ.
For North Karnataka News visit www.uksuddi.in