ಬಸ್ ಚಾಲಕ, ನಿರ್ವಾಹಕನ ಮೇಲೆ ವಿದ್ಯಾರ್ಥಿಗಳಿಂದ ಹಲ್ಲೆ !
ಬೈಲಹೊಂಗಲ: ಬಸ್ನ್ನು ಪ್ಲಾಟಫಾರ್ಮಗೆ ಹಚ್ಚುವಾಗ ಕರ್ತವ್ಯ ನಿರತ ವಾಯುವ್ಯ ಸಾರಿಗೆಯ ಚಾಲಕನೊಬ್ಬನಿಗೆ ವಿದ್ಯಾರ್ಥಿಗಳು ಹಿಗ್ಗಾಮುಗ್ಗಾ ಥಳಿಸಿದ ಘಟಣೆ ಪಟ್ಟಣದ ಬಸ್ ನಿಲ್ದಾಣದಲ್ಲಿ ಸೋಮವಾರ ಸಂಜೆ ನಡೆದಿದೆ.
ದೇವಲಾಪೂರ ಗ್ರಾಮದಿಂದ ಬಸ್ ನಿಲ್ದಾಣಕ್ಕೆ ಆಗಮಿಸಿದ ಬಸ್ ಪ್ಲಾಟ್ಫಾರ್ಮಗೆ ಹಚ್ಚುವಾಗ ಬಸ್ ನಿಲ್ದಾಣದ ಕರೆಮ್ಮ ದೇವಸ್ಥಾನ ಬಳಿ ಕಾಲೇಜು ವಿದ್ಯಾರ್ಥಿಗಳು ಅಡ್ಡಾದಿಡ್ಡಿಯಾಗಿ ದ್ವಿಚಕ್ರ ವಾಹನ ನಿಲ್ಲಿಸಿದ್ದು ಅದನ್ನು ತೆಗೆಯುವಂತೆ ಬಸ್ನ ನಿರ್ವಾಹಕ ವೀರಪ್ಪ ಬೆಳ್ಳಿಕಟ್ಟಿ ವಿದ್ಯಾರ್ಥಿಗಳಿಗೆ ವಿನಂತಿಸಿದ್ದಾನೆ. ಇದನ್ನು ವಿರೋಧಿಸಿದ ವಿದ್ಯಾರ್ಥಿಗಳು ನೇರವಾಗಿ ಬಸ್ನ್ನು ಹತ್ತಿ ವಾಹನ ಚಾಲಕ ರುದ್ರಪ್ಪ ಹತ್ತಿ ಹಾಗೂ ನಿರ್ವಾಹಕನ ಕೊರಳು ಪಟ್ಟಿ ಹಿಡಿದು ಅವರನ್ನು ಹಿಗ್ಗಾಮುಗ್ಗಾ ಮನಬಂದಂತೆ ಥಳಿಸಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡ ಚಾಲಕ ರುದ್ರಪ್ಪ ಹತ್ತಿ ಈತನನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಕೃಪೆ: ಕನ್ನಡಮ್ಮ