ಬಣಗುಡುತ್ತಿದೆ ವಿಲಾಸಪುರ ಕೆರೆ
ಗುಡ್ಡಗಳ ನಡುವಿನ ಕಣಿವೆ ಪ್ರದೇಶದಲ್ಲಿರುವ ಕೆರೆ ಅಂಗಳದಲ್ಲಿ ಸದಾಕಾಲ ನೀರು ತುಂಬಿರುತಿತ್ತು. ಮೂರು ವರ್ಷಗಳ ಮಳೆ ಕೊರತೆಯಿಂದಾಗಿ ಹನಿ ನೀರೂ ಇಲ್ಲದಂತೆ ಕೆರೆ ಬತ್ತಿದೆ. ಬಿಸಿಲಿನ ತಾಪದಿಂದಾಗಿ ಕೆರೆಯಂಗಳ ಬಿರುಕು ಬಿಟ್ಟಿದೆ.
ಮೀನುಗಾರಿಕೆಗೆ ಈ ಕೆರೆ ಹೆಸರಾಗಿತ್ತು. ಹಿಂದೆ ಪಶು ವೈದ್ಯಕೀಯ ವಿಶ್ವವಿದ್ಯಾಲಯದವರು ಈ ಕೆರೆಯಲ್ಲಿ ಬೇರೆ ಬೇರೆ ತಳಿಗಳ ಮೀನು ಬಿಟ್ಟಿದ್ದರು. ಸುತ್ತಲು ಹಸಿರು. ನಡುವೆ ಜಲರಾಶಿ ತುಂಬಿಕೊಂಡ ನೋಟ ಕಣ್ಣಿಗೆ ಹಬ್ಬವುಂಟು ಮಾಡುತ್ತಿತ್ತು.
ಮಲೆನಾಡಿನ ಚಿತ್ರ ಕಟ್ಟಿಕೊಡುವ ಬೆಟ್ಟಗುಡ್ಡಗಳ ಸಾಲು ಇಲ್ಲಿದೆ. ಇಲ್ಲಿನ ನಿಸರ್ಗವನ್ನು ಸವಿಯುವುದಕ್ಕಾಗಿಯೇ ಜಂಗಲ್ ರೆಸಾರ್ಟ್ ನಿರ್ಮಿಸಲಾಗಿದೆ. ಕೆರೆಯಂತೆ ರೆಸಾರ್ಟ್ಗಳ ಸುತ್ತಲಿನ ಪರಿಸರವೂ ಬಣಗುಡುತ್ತಿದೆ.