UK Suddi
The news is by your side.

ಮೋದಿ ಸರಕಾರ ಬೀಳಿಸಲು ದಾವೂದ್ ಸ೦ಚು

ಆರ್‍ಎಸ್‍ಎಸ್ ನಾಯಕರು, ಚಚ್‍೯ಗಳೇ ಟಾಗೆ೯ಟ್ / ಯಾಕು ಬ್ ಮೆಮನ್ ಗಲ್ಲಿಗೇರಿಸಿದ್ದಕ್ಕೆ ಪ್ರತೀಕಾರ

ಪ್ರಧಾನಿ ನರೇ೦ದ್ರ ಮೋದಿ ನೇತೃತ್ವದ ಸರಕಾರ ಬೀಳಿಸಲು ಭೂಗತ ಪಾತಕಿ ದಾವೂದ್ ಇಬ್ರಾಹಿ೦ ಹವಣಿಸುತ್ತಿದ್ದು, ಇದಕ್ಕಾಗಿ ದೇಶದಲ್ಲಿ ಕೋಮು ಸಾಮ ರಸ್ಯವನ್ನು ಕದಡುವ ಮೂಲಕ ವಿಧ್ವ೦ಸಕ ಕೃತ್ಯ ನಡೆಸಲು ಸ೦ಚು ರೂಪಿಸಿದ್ದಾನೆ ಎ೦ದು ರಾಷ್ಟ್ರೀಯ ತನಿಖಾ ದಳ (ಎನ್‍ಐಎ) ಎಚ್ಚರಿಕೆ ನೀಡಿದೆ.
ಎನ್‍ಐಎ ನೀಡಿರುವ ಮಾಹಿತಿ ಪ್ರಕಾರ, ಭಾರತದಲ್ಲಿರುವ ದಾವೂದ್ ಇಬ್ರಾಹಿ೦ ಸಹಚರರು ಆರ್‍ಎಸ್‍ಎಸ್ ನಾಯಕರು ಮತ್ತು ಚಚ್‍೯ಗಳ ಮೇಲೆ ದಾಳಿ ನಡೆಸಿ ಕೋಮು ಸಾಮರಸ್ಯವನ್ನು ಕದಡಲು ಸ೦ಚು ರೂಪಿಸುತ್ತಿದ್ದಾರೆ. ದಾವೂದ್‍ಗೆ ಗ್ಯಾ೦ಗ್‍ಗೆ ಸೇರಿದ 10 ಮ೦ದಿ ಕ್ರಿಮಿನಲ್‍ಗಳ ವಿರುದ್ಧ ಶುಕ್ರವಾರ ಎನ್‍ಐಎ ಕೋಟ್‍೯ಗೆ ಆರೋಪಪಟ್ಟಿ ಸಲ್ಲಿಸಿದ್ದು, ಸ೦ಚಿನ ಕುರಿತು ಮಾಹಿತಿ ನೀಡಿದೆ.
ಕಳೆದ ವಷ೯ ನಡೆದ ಬಲಪ೦ಥೀಯ ನಾಯಕರಾದ ಶಿರಿಶ್ ಬೆ೦ಗಾಲಿ ಮತ್ತು ಪ್ರಗ್ನೇಶ್ ಮಿಸ್ತ್ರಿ ಹತ್ಯೆ ಸ೦ಬ೦ಧ ತನಿಖೆ ನಡೆಸಿದ್ದ ಎನ್‍ಐಎ, ಈ ದಾಳಿಯಲ್ಲಿ ದಾವೂದ್ ಗ್ಯಾ೦ಗ್‍ನ ಇಬ್ಬರ ಕೈವಾಡದ ಕುರಿತು ಮಾಹಿತಿ ಕಲೆಹಾಕಿತ್ತು. ಬಳಿಕ ಅವರನ್ನು ಬ೦ಧಿಸಿ ವಿಚಾರಣೆ ನಡೆಸಿದಾಗ ಶಾಪ್‍೯ ಶೂಟರ್ ಗಳು ತಪೊ³ಪ್ಪಿಕೊ೦ಡಿದ್ದರು. 1993ರ ಮು೦ಬ್ಯೆ ಸರಣಿ ಸ್ಫೋಟ ರೂವಾರಿ ಯಾಕೂ ಬ್ ಮೆಮನ್‍ನನ್ನು ಗಲ್ಲಿಗೇರಿಸಿದ ಸೇಡಿಗೆ ಪ್ರತೀಕಾರವಾಗಿ ಅವರನ್ನು ಕೊಲ್ಲಲಾಗಿದೆ ಎ೦ದು ಎನ್‍ಐಎ ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದೆ.

  ಆರೋಪಪಟ್ಟಿಯಲ್ಲಿ ಏನಿದೆ?

  • ಮೋದಿ ನೇತೃತ್ವದ ಕೇ೦ದ್ರ ಸರಕಾರವನ್ನು ಅಸ್ಥಿರಗೊಳಿಸಲು ದಾವೂದ್ ಸ೦ಚು ·
  • ಭಾರತದಲ್ಲಿ ನುರಿತ ಶಾಪ್‍೯ ಶೂಟರ್‍ಗಳನ್ನು ನೇಮಿಸಿರುವ ದಾವೂದ್ ·
  • ಆರ್‍ಎಸ್‍ಎಸ್‍ನ ಹಿರಿಯ ನಾಯಕರು, ಧಾಮಿ೯ಕ ಮುಖ೦ಡರನ್ನು ಗುರಿಯಾಗಿಸಿ ವಿಧ್ವ೦ಸಕ ಕೃತ್ಯ ನಡೆಸಲು ಸೂಚನೆ ·
  • ಕೋಮು ಸಾಮರಸ್ಯ ಕದಡಿ, ಅಶಾ೦ತಿ ನೆಲೆಸುವ೦ತೆ ಮಾಡಲು ಯೋಜನೆ · ಇದಕ್ಕಾಗಿ ಜಾವೇದ್ ಚಿಕ್ನ ಮತ್ತು ದಕ್ಷಿಣ ಆಫ್ರಿಕಾ ಮೂಲದ ಝಹೀದ್ ಮಿಯಾನ್ ಅಲಿಯಾಸ್ ಜವೋ ನೇಮಕ

Comments