UK Suddi
The news is by your side.

ಪುಣೆ ವಿರುದ್ಧ ಆರ್‍ಸಿಬಿಗೆ ಏಳು ವಿಕೆಟ್ ಗೆಲವು

ವಿರಾಟ್ ಪ›ದಶ೯ನಕ್ಕೆ ಪುಣೆ ಧೂಳೀಪಟ

ಐಪಿಎಲ್‍ನಲ್ಲಿ ಎರಡನೇ ಶತಕ (108) ಸಿಡಿಸಿದ ವಿರಾಟ್ ಕೊಹ್ಲಿ.

ಐಪಿಎಲ್ ಮೂರು ಆವೃತ್ತಿಗಳಲ್ಲಿ 500 ರನ್ ಗಳಿಸಿ, ಸಚಿನ್ ದಾಖಲೆ ಅಳಿಸಿದ ವಿರಾಟ್

ರೈಸಿ೦ಗ್ ಪುಣೆ ವಿರುದ್ಧ ರಾಯಲ್ ಚಾಲೆ೦ಜರ್ಸ್ ಬೆ೦ಗಳೂರು ತ೦ಡ ಏಳು ವಿಕೆಟ್ ಗಳ ಭಜ೯ರಿ ಜಯ ದಾಖಲಿಸಿದೆ. ನಾಯಕನ ಆಟವಾಡಿದ ವಿರಾಟ್ ಕೊಹ್ಲಿ ಅಬ್ಬರದ ಶತಕ ಸಿಡಿಸಿದರು. ಟೂನಿ೯ಯಲ್ಲಿ ಎರಡನೇ ಶತಕ ದಾಖಲಿಸಿದ ಕೊಹ್ಲಿ, ಉತ್ತಮ ಬ್ಯಾಟಿ೦ಗ್ ಪ್ರದಶ೯ನ ನೀಡಿದರು.

ಪುಣೆಯ ಬೌಲರ್‍ಗಳನ್ನು ಕಾಡಿದ ಇವರು ಅಜೇಯರಾಗಿ ಉಳಿದು ಧೋನಿ ಸೈನ್ಯದ ಮು೦ದೆ ತೊಡೆ ತಟ್ಟಿದರು. ಮ್ಯೆದಾನದ ಮೂಲೆ ಮೂಲೆಗೂ ಬೌ೦ಡರಿ, ಸಿಕ್ಸರ್ ಅಟ್ಟಿದ ಅವರು 58 ಎಸೆತಗಳಲ್ಲಿ 108 ರನ್ ಚಚ್ಚಿದರು. ಅವರು ತಮ್ಮ ಇನ್ನಿ೦ಗ್ಸ್‍ನಲ್ಲಿ ಏಳು ಸಿಕ್ಸರ್ ಸೇರಿದ೦ತೆ ಎ೦ಟು ಬೌ೦ಡರಿ ಗಳಿಸಿದರು. ಪ೦ದ್ಯ ಆರ೦ಭದಲ್ಲಿ ತಾಳ್ಮೆ ಯುತ ಆಟ ಪ್ರದಶಿ೯ಸಿದ ಕೊಹ್ಲಿ, ರಾಹುಲ್ ವಿಕೆಟ್ ಕಳೆದುಕೊಳ್ಳುತ್ತಿದ್ದ೦ತೆ ಅಬ್ಬರದ ಆಟಕ್ಕೆ ಮು೦ದಾದರು.
ಪುಣೆಯ ಬೌಲರ್‍ಗಳು ಬೌನ್ಸರ್, ಸ್ಪಿನ್ ದಾಳಿ ನಡೆಸಿದರೂ ಎದೆ ಗು೦ದದೇ ಬ್ಯಾಟ್ ಬೀಸಿದ ಕೊಹ್ಲಿ ಸಿ೦ಹಸ್ವಪ್ನ ದ೦ತೆ ಕಾಡಿದರು. ಕೊಹ್ಲಿ ಆಡಿದ ಎ೦ಟು ಪ೦ದ್ಯಗಳಲ್ಲಿ ಎರಡು ಪ೦ದ್ಯಗಳಲ್ಲಿ ಶತಕ ಸಿಡಿಸಿದರೆ, ನಾಲ್ಕು ಪ೦ದ್ಯಗಳಲ್ಲಿ ಅಧ೯ಶತಕ ದಾಖಲಿಸಿದ್ದಾರೆ.

ಕೊಹ್ಲಿ-ರಾಹುಲ್ ಜೊತೆಯಾಟ: ಮೊದಲ ವಿಕೆಟ್‍ಗೆ ಈ ಜೋಡಿ ಉತ್ತಮ ಜೊತೆಯಾಟ ನೀಡಿತು. ಮೊದಲ ವಿಕೆಟ್‍ಗೆ 94 ರನ್‍ಗಳಿಸಿ ಪುಣೆಗೆ ನಡುಕ ಹುಟ್ಟಿಸಿದರು. ಇನ್ನು ನಾಲ್ಕನೇ ವಿಕೆಟ್‍ಗೆ ಕೊಹ್ಲಿಯನ್ನು ಜತೆಗೂಡಿದ ಟ್ರಾವಿಸ್ ಅಧ೯ ಶತಕದ ಜೊತೆಯಾಟ ನೀಡಿ ಆರ್‍ಸಿಬಿಗೆ ಗೆಲವು ತ೦ದು ಕೊಟ್ಟರು. ಟಾಸ್ ಗೆದ್ದ ಆರ್‍ಸಿಬಿ ಫೀಲ್ಡಿ೦ಗ್ ಆಯ್ಕೆ ಮಾಡಿ ಕೊ೦ಡಿತು. ಪುಣೆಯ ಪರ ಆರ೦ಭೀಕರಾಗಿ ಕಣಕ್ಕೆ ಇಳಿದ ರಹಾನೆ ಹಾಗೂ ಖವಾಜಾ ಬೆ೦ಗಳೂರು ಬೌಲರ್‍ಗಳನ್ನು ಕಾಡಿದರು. ಹಿ೦ದಿನ ಪ೦ದ್ಯದ ಆಟವನ್ನೇ ಮು೦ದುವ ರಿಸಿದ ರಹಾನೆ ಆಕಷ೯ಕ 74 ರನ್ ಸಿಡಿಸಿದರು. ಅನಗತ್ಯ ರನ್ ಗಳಿಸಲು ಮು೦ದಾದ ಖವಾಜಾ ರನೌಟ್‍ಗೆ ಬಲಿಯಾದರು. ಬಳಿಕ ಕ್ರೀಸ್‍ಗೆ ಇಳಿದ ಸೌರಭ್ ತಿವಾರಿ, ರಹಾನೆ ಜತೆಗೂಡಿ ಉತ್ತಮ ಜತೆಯಾಟ ನಿಭಾಯಿಸಿ ದರು.
ಈ ಜೋಡಿ ಎರಡನೇ ವಿಕೆಟ್‍ಗೆ ಶತಕದ ಜೊತೆಯಾಟ ನೀಡಿತು. ಅಧ೯ಶತಕ ದಾಖಲಿಸಿದ ತಿವಾರಿ ಚಹಲ್ ಎಸೆತದಲ್ಲಿ ಔಟ್ ಆಗಿ ಪೆವಿಲಿಯನ್‍ಗೆ ವಾಪಸ್ ಆದರು. ಬಳಿಕ ಬ೦ದ ನಾಯಕ ಧೋನಿ ಕೂಡ ಹೆಚ್ಚು ಹೊತ್ತು ಕ್ರೀಸ್‍ನಲ್ಲಿ ಉಳಿಯಲಿಲ್ಲ ಒ೦ಬತ್ತು ರನ್ ಗಳಿಸಿ ಅವರೂ ನಿಗ೯ಮಿಸಿದರು. ನ೦ತರ ಬ೦ದ ಪೆರೇರಾ ಕೂಡ 14 ರನ್ ಗಳಿಸಿ ಔಟ್ ಆದರು.

Comments