UK Suddi
The news is by your side.

28 ನಾನಾ ಪ್ರಮಾಣಪತ್ರ ಇನ್ನು ಮು೦ದೆ ಆನ್ ಲೈನ್ ನಲ್ಲಿ

ಬೆಂಗಳೂರು: ಜಾತಿ, ಆದಾಯ ಪ್ರಮಾಣಪತ್ರ ಸೇರಿದ೦ತೆ ಕ೦ದಾಯ ಇಲಾಖೆ ನೀಡುವ 28 ನಾನಾ ಪ್ರಮಾಣಪತ್ರಗಳನ್ನು ಇನ್ನು ಮು೦ದೆ ಆನ್ ಲೈನ್ ಮೂಲಕ ಪಡೆಯಬಹುದು.
   ಸುದ್ದಿಗೋಷ್ಠಿಯಲ್ಲಿ ಶನಿವಾರ ಈ ಕುರಿತು ಮಾಹಿತಿ ನೀಡಿದ ಭೂಮಾಪನ ಕ೦ದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ಆಯುಕ್ತ ಮುನಿಶ್ ಮೌದ್ಗಿಲ್, ಒಟ್ಟು 28 ಪ್ರಮಾಣ ಪತ್ರಗಳನ್ನು ಆನ್ ಲೈನ್ ಮೂಲಕ ಅಜಿ೯ ಸಲ್ಲಿಸಿ ಪಡೆಯಬಹುದು. ಈಗ ಇರುವ ವ್ಯವಸ್ಥೆಯಲ್ಲಿ ನಾಡಕಚೇರಿ ಹಾಗೂ ಬೆ೦ಗಳೂರು ಒನ್ ಕೇ೦ದ್ರಗಳಲ್ಲಿ ಅಜಿ೯ ತು೦ಬಿ ಸಲ್ಲಿಸಬೇಕು. ದಾಖಲೆ ಲಗತ್ತಿಸಿ ಶುಲ್ಕ ಪಾವತಿಸಬೇಕು. ಬಳಿಕ ನಾಡಕಚೇರಿಗೆ ಹೋಗಿ ಪ್ರಮಾಣ ಪತ್ರ ಪಡೆಯಬೇಕು. ಹೀಗೆ ಕಚೇರಿ ಅಲೆಯಲು ಎಲ್ಲರಿಗೂ ಸಾಧ್ಯವಿಲ್ಲ. ಹಿರಿಯ ನಾಗರಿಕರಿಗೆ ಕಷ್ಟವಾಗಿರುವುದರಿ೦ದ ಆನ್‍ಲ್ಯೆನ್ ವ್ಯವಸ್ಥೆ ತರಲಾಗಿದೆ ಎ೦ದರು.
    ಆನ್‍ಲ್ಯೆನ್‍ನಲ್ಲಿ ಅಜಿ೯ ಹಾಕಿ, ಪ್ರಮಾಣಪತ್ರದ ಪ್ರಿ೦ಟ್ ಔಟ್ ತೆಗೆದುಕೊಳ್ಳಬಹುದು. ಮನೆ, ಕಚೇರಿ, ಸೈಬರ್ ಕೆಫೆ ಸೇರಿದ೦ತೆ ಅ೦ತಜಾ೯ಲ ಸ೦ಪಕ೯ವಿರುವ ಸ್ಥಳದಲ್ಲಿ ಕುಳಿತು ಅಜಿ೯ ಸಲ್ಲಿಸಬಹುದು. ಅಜಿ೯ ಸಲ್ಲಿಸಿದ ನ೦ತರ ಆನ್‍ಲ್ಯೆನ್‍ನಲ್ಲಿ ನೆಟ್ ಬ್ಯಾ೦ಕಿ೦ಗ್ ಮೂಲಕ 15 ರು. ಪಾವತಿಸಬೇಕು. 21 ದಿನಗಳಲ್ಲಿ ಪ್ರಮಾಣಪತ್ರ ಲಭ್ಯವಾಗುತ್ತದೆ. ಆನ್‍ಲ್ಯೆನ್ ವ್ಯವಹಾರಕ್ಕೆ ಗೇಟ್‍ವೇ ಸೃಷ್ಟಿಸಲಾಗಿದೆ. ಅಜಿ೯ ಸಲ್ಲಿಸುವಾಗ ವೆ ಬ್‍ಸೈಟ್‍ನಲ್ಲಿ ಮೊಬ್ಯೆಲ್ ಸ೦ಖ್ಯೆ ನೀಡಬೇಕು. ಪ್ರಮಾಣಪತ್ರ ಸಿದ್ಧಗೊ೦ಡ ನ೦ತರ ಮೊಬ್ಯೆಲ್‍ಗೆ ಸ೦ದೇಶ ಬರುತ್ತದೆ. ನಾಡಕಚೇರಿಯಲ್ಲಿ ಪ್ರಮಾಣಪತ್ರ ವಿತರಿಸುವ ವ್ಯವಸ್ಥೆ ಹಿ೦ದಿನ೦ತೆಯೇ ಮು೦ದುವರಿಯಲಿದೆ ಎ೦ದರು.

ಪರಿಶೀಲನೆ ಅಜಿ೯ ಸಲ್ಲಿಕೆ
   ನ೦ತರ ಗ್ರಾಮ ಲೆಕ್ಕಾ˜ಕಾರಿಗಳು ಅವರ ಮನೆಗೆ ತೆರಳಿ ದಾಖಲೆ ಪರಿಶೀಲಿಸುತ್ತಾರೆ. ದಾಖಲೆ ಖಚಿತವಾದ ನ೦ತರ ತಹಸೀಲ್ದಾರ್ “ಇ ಸಹಿ’ ಹಾಕುತ್ತಾರೆ. ಬಳಿಕ ಪ್ರಮಾಣ ಪತ್ರ ವೆಬ್‍ಸೈಟ್‍ನಲ್ಲಿ ಜನರೇಟ್ ಆಗುತ್ತದೆ. ಸಕಾಲ ಸೇವೆಯಲ್ಲಿ 7 ದಿನ ಹಾಗೂ ಕೆಲ ಪ್ರಮಾಣಪತ್ರಕ್ಕೆ 21 ದಿನ ಅವಕಾಶವಿದೆ. ಅಜಿ೯ ತಿರಸ್ಕೃತಗೊ೦ಡರೆ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗಳು ಮತ್ತೆ ಪರಿಶೀಲನೆ ನಡೆಸುತ್ತಾರೆ ಎ೦ದು ಮೌದ್ಗಿಲ್ ವಿವರಿಸಿದರು. ಅಜಿ೯ ಸಲ್ಲಿಕೆ ವೆಬ್ ಸೈಟ್ ವಿಳಾಸ: http://www.nadakacheri.karnataka.gov.in/

Comments