UK Suddi
The news is by your side.

ಚಮಚ ಕಂಡು ಮಾಂಸ ಎಂದವರ ಕತೆ ಕೇಳಿದಿರಾ?

image

ಚಿರಂಜೀವಿ ಭಟ್ ಪತ್ರಕರ್ತ

 ಚುನಾವಣೆ ವೇಳೆ ನಡೆಯುವ ಬಾಡೂಟಗಳ ಬಗ್ಗೆಯಾಗಲೀ ಅಥವಾ ಮುಸಲ್ಮಾನರು ಬಕ್ರೀದ್ ವೇಳೆ ಇ-ರ್ ಕೂಟದಲ್ಲಿ ಮಾಡುವ ಮಾಂಸದೂಟದ ಬಗ್ಗೆಯಾಗಲೀ ಯಾರೂ ಮಾತನಾಡುವುದಿಲ್ಲ. ಅದು ಬಿಡಿ, ಆಗೆಲ್ಲ ಪ್ರಾಣಿಹತ್ಯೆಯನ್ನು ಖಂಡಿಸಿಯೂ ಯಾರೂ ಮಾತನಾಡುವುದಿಲ್ಲ, ಬರೆಯುವುದಿಲ್ಲ. ಈಗ ಮಾತ್ರ ಯಾವುದೋ ಹತ್ತೇ ಹತ್ತು ಮನೆ ಇರುವ ಊರಲ್ಲಿ ಬಡ ಬ್ರಾಹ್ಮಣರು, ಲೋಕದಲ್ಲಿರುವ ಕೆಟ್ಟ ಜನರನ್ನೂ ಸೇರಿಸಿ ಲೋಕ ಕಲ್ಯಾಣಕ್ಕಾಗಿ ಸೋಮಯಾಗ ಮಾಡಿದರೆ ‘ಪುರೋಹಿತಶಾಹಿ’ ಎಂದು ಊಳಿಡುತ್ತಿದ್ದಾರೆ.

ಸೋಮಯಾಗದ ವಿಷಯಕ್ಕೆ ಬರೋಣ. ಮತ್ತೂರು ಎಂಬುದು ಪುಟ್ಟ ಊರಾದರೂ ಸಂಸ್ಕೃತ ಮಾತಾಡುವ ಊರು. ಅಲ್ಲಿ ನೂರಕ್ಕೆ ನೂರು ಸಂಸ್ಕೃತ ಮಾತಾಡುವವರೇ. ಆ ಊರಿನಲ್ಲಿರುವವರು ಶುದ್ಧ ಸಸ್ಯಾಹಾರಿಗಳು. ಇವರು ಓಡಾಡುವ ರಸ್ತೆಯಲ್ಲಿ ಮೊಟ್ಟೆ ಒಡೆದು ಬಿದ್ದಿದ್ದರೂ ನೇರವಾಗಿ ಮನೆಗೆ ಬಂದು ಸ್ನಾನ ಮಾಡುವಂಥವರು. ಇಂಥ ಬ್ರಾಹ್ಮಣರ ಊರಲ್ಲಿ ಮಾಂಸ ಮಾಡುತ್ತಾರಾ ಎಂದು ನಾನೂ ಒಂದು ಕ್ಷಣ ದಂಗಾದೆ. ಆದರೆ, ವೇದ, ಶಾಸ ಪುರಾಣಗಳ ಮೇಲೆ ಮತ್ತೂರು ಜನ ನಂಬಿಕೆ ಇಟ್ಟಿದ್ದರಿಂದ ಸೋಮಯಾಗ ಹೇಗೆ ಮಾಡುವುದು ಎಂದೆಲ್ಲ ಹುಡುಕಿ ನೋಡಿದೆ. ಪುರಾಣಗಳ ಉದಾಹರಣೆ ಬೇಕೆಂದರೆ ಮಹಾಭಾರತದಲ್ಲೂ ಸೋಮಯಾಗದ ಉಲ್ಲೇಖವಿದೆ. ಆದರೆ ಒಂದು ಕಡೆಯೂ ಕುರಿ, ಮೇಕೆ ಮತ್ತೊಂದನ್ನೋ ಬಲಿ ಕೊಡುವ ಯಾವುದೇ ಉಲ್ಲೇಖವೇ ಇಲ್ಲ. ಆದರೆ ಇಲ್ಲೊಂದು ಗಮನಿಸಬೇಕಾದ ಸಂಗತಿಯಿದೆ.

 ಅದೇನೆಂದರೆ, ಸೋಮಯಾಗದ ಸಮಯದಲ್ಲಿ ಮೇಕೆ ಹಾಲು ಮತ್ತು ಹಸುವಿನ ಹಾಲು ಅಲ್ಲೇ ಕರೆದು ಹೋಮಕ್ಕೆ ಹಾಕಲಾಗುತ್ತದೆ. ಮೊನ್ನೆ ಮತ್ತೂರಿನಲ್ಲೂ ಹೀಗೆ ಮೇಕೆ ಮತ್ತು ಹಸುವನ್ನು ತಂದು ಕಟ್ಟಿ ಹಾಕಿ. ಆಗಾಗ ಹಾಲು ಕರೆದು ಅಲ್ಲೇ ಇದ್ದ ಹೋಮಕುಂಡಕ್ಕೆ ಹಾಕುತ್ತಿದ್ದರು. ಬೆಂಕಿ ಜೋರಾಗಿ ಹೊತ್ತಿ ಉರಿಯುವ ಹೋಮಕುಂಡಕ್ಕೆ ಕೈಯಿಂದ ಆಹುತಿ ನೀಡಲಾಗುವುದಿಲ್ಲ ಎಂದು ಸೃಕ್ ಸ್ರುವ. ಬಳಸುತ್ತಿದ್ದರು. ಸೃಕ್ ಸ್ರುವ ಎಂದರೆ ಯಾವುದೋ ಹೆಂಡದ ಹೆಸರು ಎಂದು ರೊಚ್ಚಿಗೇಳುವ ಪತ್ರಕರ್ತರಿಗೆ ಅರ್ಥವಾಗುವ ಹಾಗೆ ಹೇಳುವುದಾರೆ, ಸೃಕ್ ಸ್ರುವ ಎಂದರೆ ಮರದ ಚಮಚ. ಸೃಕ್ ಎಂದರೆ ದೊಡ್ಡ ಚಮಚ, ಸ್ರುವ ಎಂದರೆ ಸಣ್ಣ ಚಮಚ. ಅದರಲ್ಲಿ, ಹಾಲು, ತುಪ್ಪ ಇತ್ಯಾದಿಗಳನ್ನು ತಟ್ಟೆಯಿಂದ ತೆಗೆದುಕೊಂಡು ಹೋಮಕ್ಕೆ ಹಾಕುತ್ತಾರೆ. ಕೆಲ ಮಾಧ್ಯಮಗಳು ತೋರಿಸುವ ಫೋಟೋದಲ್ಲಿರುವುದು ದೊಡ್ಡ ಚಮಚ. ಹಾಲು ತುಪ್ಪ ಎಲ್ಲ ಒಂದರಲ್ಲೇ ಬೆಂಕಿಗೆ ಸುರಿಯುತ್ತಿದ್ದರಿಂದ ಅದು ಕೆಂಪಾಗಿತ್ತು. ಇದು ಸಹಜ.

ಈ ವಿಚಾರ ಎಂಥ ದಡ್ಡನಿಗೂ ಅರ್ಥವಾಗುತ್ತದೆ. ಅದಕ್ಕೆ ಪತ್ರ¬ಕರ್ತನೇ ಆಗಬೇಕೆಂದಿಲ್ಲ. ಆದರೆ, ಈ ಸುದ್ದಿ ಮಾಡಿರುವ ಪತ್ರಕರ್ತರಲ್ಲಿ ರುವುದು ಬ್ರಾಹ್ಮಣರ ವಿರುದ್ಧದ ದ್ವೇಷವೇ ಹೊರತು ಮತ್ತೇನೂ ಅಲ್ಲ ಎನ್ನುವುದಕ್ಕೆ ಸಾಕ್ಷಿಯೇ ಚಮಚವನ್ನು ನೋಡಿ ಮಾಂಸ ಎಂದು ಊಳಿಟ್ಟಿದ್ದು. ಮನಸ್ಸು ಕನ್ನಡಿ ಎನ್ನುತ್ತಾರೆ. ಒಂದು ಚಮಚ ಇವರಿಗೆ ಮಾಂಸವಾಗಿ ಕಂಡಿದೆ ಎಂದಾದರೆ ಪತ್ರಕರ್ತರ ಕ್ರೌರ್ಯ ಇದರಲ್ಲಿ ಕಾಣಬಹುದು. ಇನ್ನೂ ಮಜಾ ಎಂದರೆ ಕೆಲ ಟಿವಿ ಚಾನೆಲ್ಗಳೂ ಇದೇ ವಿಷಯವನ್ನು ಪ್ರಸಾರ ಮಾಡು ವು ದಕ್ಕೆ ನಿಂತವು. ಒಂದು ಹೆಜ್ಜೆ ಮುಂದೆ ಹೋಗಿ ಹೋಮದ ಕುಂಡದಲ್ಲಿ ಹಾಕಿದ್ದ ಮಾಂಸವನ್ನು ಬ್ರಾಹ್ಮಣರೆಲ್ಲ ಪ್ರಸಾದವಾಗಿ ಸ್ವೀಕರಿಸಿದರು ಎಂದು ಘೋಷಿ ಸಿ ಬಿಟ್ಟರು. ಒಂದೆರಡು ದಿನ ಎಲ್ಲಿ ನೋಡಿದರೂ ಬ್ರಾಹ್ಮ ಣರು, ಬ್ರಾಹ್ಮಣರು, ಬ್ರಾಹ್ಮಣರು! ಮೂರೆಳೆ ಜನಿ¬ ವಾರ ಧರಿಸಿರುವ ಬ್ರಾಹ್ಮಣ ಇವರಿಗೆಲ್ಲ ಇಷ್ಟು ಕಿರಿಕಿರಿ ಮಾಡು ತ್ತಿದ್ದಾನೆಂದರೆ, ಈ ಪತ್ರಕರ್ತರಿಗೆ ಅದೆಷ್ಟು ಅಭ¬ ದ್ರತೆ ಕಾಡುತ್ತಿದೆ ಎಂದು ನೀವು ಊಹಿಸಿಕೊಳ್ಳಬಹುದು.

ಇವರಿಗೆ ಬ್ರಾಹ್ಮಣರ ಬಗ್ಗೆ ದ್ವೇಷವಿದೆ ಎಂದು ಸ್ಪಷ್ಟಪಡಿಸುವುದಕ್ಕೆ, ಮತ್ತೊಂದು ನಿದರ್ಶನ ಕೊಡುತ್ತೇನೆ ಕೇಳಿ. ಈ ಎಲ್ಲ ವೃತ್ತಾಂತ ಆದ ಮೇಲೆ ಹಲವಾರು ಪತ್ರಕರ್ತರು, ಅಧಿಕಾರಿಗಳು ಬಂದು ಸ್ಥಳ ಪರಿಶೀಲನೆ ಮಾಡಿ, ಇಲ್ಲಿ ಯಾವ ಬಲಿಯೂ ನಡೆದಿಲ್ಲ, ಯಾವ ಬ್ರಾಹ್ಮಣನ ಹೊಟ್ಟೆಯಲ್ಲೂ ಮಾಂಸವಿಲ್ಲ ಎಂದು ಮುದ್ರೆ ಒತ್ತಿದ ಮೇಲೆ, ‘ಸುದ್ದಿ ಬ್ರೇಕ್’ ಮಾಡಿದ್ದೇವೆ ಎಂದು ಕೊಚ್ಚಿ ಕೊಂಡವರು ತೆಪ್ಪಗಾಗಿದ್ದಾರೆ. ಒಂದು ಸಂಕೇತಿ ಬ್ರಾಹ್ಮಣರ ಸಮುದಾಯಕ್ಕೆ ಮಾಡಿದ ಹಾನಿಗೆ ಇವರ್ಯಾದರಿಗೂ ಕ್ಷಮೆ ಕೇಳಬೇಕು ಎನಿಸದೇ ಇರುವುದು ಬ್ರಾಹ್ಮಣ್ಯ ವಿರೋಧದ ಮನಸ್ಥಿತಿಯನ್ನು ತೋರಿಸುತ್ತದೆ.

ಕೃಪೆ, ವಿಶ್ವವಾಣಿ

Comments