UK Suddi
The news is by your side.

ರಾಜ್ಯಪಾಲರಿಗೆ ಮನವಿ

image

ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪನವರು ಮಾನ್ಯ ರಾಜ್ಯಪಾಲರಾದ,   ಶ್ರೀಯುತ ವಜುಭಾಯಿ ವಾಲಾ ಅವರನ್ನು ಭೇಟಿಯಾಗಿ ರಾಜ್ಯದಲ್ಲಿ ತಲೆದೂರಿರುವ ಬರಗಾಲದ ಕುರಿತು ವಿಸ್ತಾರವಾಗಿ ತಿಳಿಸಿದರು ಮತ್ತು ರಾಜ್ಯಪಾಲರಿಗೆ ಈ ಕೆಳಕಂಡಂತಹ ವಿಚಾರಗಳನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಗಮನಕ್ಕೆ ತಂದು ಇದರ ಬಗ್ಗೆ ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದರು.
*ರೈತರ ಸಾಲವನ್ನು ಬಡ್ಡಿಸಹಿತ ಮನ್ನಾ ಮಾಡಬೇಕು.
* ಬೀಜ ಮತ್ತು ಗೊಬ್ಬರವನ್ನು ಮುಂಗಾರಿನಲ್ಲಿ ಉಚಿತವಾಗಿ   ವಿತರಿಸಬೇಕು.
* ರಾಜ್ಯದಲ್ಲಿ ಮೇವು ವಿತರಿಸುವ ಕೇಂದ್ರಗಳನ್ನು ಶುರು ಮಾಡಬೇಕು.              * ರಾಜ್ಯದಲ್ಲಿ ಪ್ರತಿದಿನ 8 ಗಂಟೆ 3 ಪೇಸ್ ವಿದ್ಯುತ್ತನ್ನು ನಿರಂತರವಾಗಿ ಕೊಡುವ ಮೂಲಕ ರೈತರಿಗೆ ಅನುಕೂಲಕರ ವಾತಾವರಣವನ್ನು ಸೃಷ್ಠಿಮಾಡಬೇಕು.
* ರಾಜ್ಯದಲ್ಲಿ ಪ್ರಸ್ತುತವಾಗಿ ಕೇವಲ 7 ಗೋಶಾಲೆಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದು,ಆದರೆ ಅಗತ್ಯವಿರುವುದು 32ಕ್ಕು ಹೆಚ್ಚು ಗೋಶಾಲೆಗಳು ಹಾಗಾಗಿ ಈ ಕೂಡಲೇ ಇದರ ಬಗ್ಗೆ ತಕ್ಷಣ ಗಮನ ಹರಿಸಬೇಕು.  

Comments