300ನೇ ದಿನ ಪೂರೈಸಿದ ಮಹದಾಯಿ ಹೋರಾಟ
ನರಗುಂದ: ಕಳಸಾ-ಬಂಡೂರಿ ನಾಲಾ ಮತ್ತು ಮಹದಾಯಿ-ಮಲಪ್ರಭಾ ನದಿ ಜೋಡಣೆ ಯೋಜನೆ ಜಾರಿಗೆ ಸಂಬಂಧಿಸಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿರ್ಲಕ್ಷ್ಯ ಖಂಡಿಸಿ ಹೋರಾಟದ 300ನೇ ದಿನವಾದ ಮಂಗಳವಾರ ರೈತರು ಕರೆನೀಡಿದ್ದ ನರಗುಂದ ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಹುತೇಕ ಅಂಗಡಿ, ಮುಂಗಟ್ಟುಗಳು ಮುಚ್ಚಿದ್ದವು. ಬಸ್, ಆಟೋ ಮತ್ತಿತರ ವಾಹನಗಳ ಸಂಚಾರ ಇಲ್ಲದ್ದರಿಂದ ಜನರು ತೊಂದರೆ ಅನುಭವಿಸಿದರು.
ಮಾಸಾಂತ್ಯ ಗಡುವು: ವಿವಾದಕ್ಕೆ ಮೇ 30ರೊಳಗಾಗಿ ಪರಿಹಾರ ಸೂಚಿಸಬೇಕು. ಇಲ್ಲದಿದ್ದರೆ ಶಾಸಕರು, ಸಂಸದರ ಮನೆ ಮುಂದೆ ರೈತರು ಧರಣಿ ನಡೆಸುವುದಲ್ಲದೇ ಅವರ ರಾಜೀನಾಮೆಗೆ ಒತ್ತಾಯಿಸಲಾಗುವುದು. ದೆಹಲಿ ಚಲೋ ಕೈಗೊಂಡು ರಾಷ್ಟ್ರಪತಿಗಳನ್ನು ಭೇಟಿಯಾಗಿ ಮನವಿ ನೀಡಲಾಗುವುದೆಂದು ರಾಜ್ಯ ರೈತ ಸೇನಾ ಕರ್ನಾಟಕ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಹೇಳಿದರು.