UK Suddi
The news is by your side.

ಜೆಡಿಎಸ್ ಬೆಂಬಲದಿಂದ ಬೆಳಗಾವಿ ಜಿಪಂ “ಕೈ”ವಶ

image

ಕಾಂಗ್ರೆಸ್‍ಗೆ 46, ಬಿಜೆಪಿಗೆ 39 ಸದಸ್ಯರ ಬೆಂಬಲ
ಬೆಳಗಾವಿ 11: ಬೆಳಗಾವಿ ಜಿಲ್ಲಾ ಪಂಚಾಯಿತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳು ನಿರೀಕ್ಷೆಯಂತೆ ಕೈ ವಶವಾಗಿದೆÉ.
ಬುಧÀವಾರ ನಡೆದ ಚುನಾವಣೆಯಲ್ಲಿ ಜಿಪಂ ನೂತನ ಅಧÀ್ಯಕ್ಷರಾಗಿ ಅಥಣಿ ತಾಲೂಕಿನ ಉಗಾರ ಬಿ.ಕೆ ಜಿಪಂ ಕ್ಷೇತ್ರದ ಸದಸ್ಯೆ ಆಶಾ ಪ್ರಶಾಂತ ಐಹೊಳೆ ಹಾಗೂ ಉಪಾಧ್ಯಕ್ಷರಾಗಿ ಬೆಳಗಾವಿ ತಾಲೂಕಿನ ಕಡೋಲಿ ಕ್ಷೇತ್ರದ ಸದಸ್ಯ ಅರುಣ ಅಣ್ಣು ಕಟಾಂಬಳೆ ಆಯ್ಕೆಯಾಗಿದ್ದಾರೆ.
ಜೆಡಿಎಸ್‍ನ ಇಬ್ಬರು ಹಾಗೂ ಕರ್ನಾಟಕ ಸ್ವರಾಜ್ಯ ಪಕ್ಷದ ಓರ್ವ ಸದಸ್ಯನ ಬೆಂಬಲದೊಂದಿಗೆ ಕಾಂಗ್ರೆಸ್ 46 ಸ್ಥಾನ ಪಡೆದು ಎರಡೂ ಸ್ಥಾನಗಳನ್ನು ತನ್ನದಾಗಿಸಿಕೊಂಡಿತು. ಆಶಾ ಅವರ ಪ್ರತಿಸ್ಪರ್ಧಿಗಳಾದ ಬಿಜೆಪಿಯ ಕಾದ್ರೊಳ್ಳಿ ಕ್ಷೇತ್ರದ ಬಸವ್ವ ಕೋಲ್ಕಾರ 39 ಹಾಗೂ ಹಿಂಡಲಗಾ ಕ್ಷೇತ್ರದ ಎಂಇಎಸ್‍ನ ಸದಸ್ಯೆ ಮಾಧುರಿ ಅನಿಲ್ ಹೆಗಡೆ ಕೇವಲ 5 ಮತ ಪಡೆದುಕೊಂಡರು. ಅರುಣ ಅವರ ಪ್ರತಿಸ್ಪರ್ಧಿಗಳಾದ ಕಾಗವಾಡ ಜಿಪಂನ ಅಜೀತ ಭÀರಮು ಚೌಗಲೆ 39 ಹಾಗೂ ಜಾಂಬೋಟಿ ಕ್ಷೇತ್ರದ ಎಂಇಎಸ್‍ನ ಸದಸ್ಯ ಜಯರಾಮ ಕೃಷ್ಣಾ ದೇಸಾಯಿ 5 ಮತಗಳನ್ನು ಪಡೆದುಕೊಂಡರು.
ಕಣದಲ್ಲಿರುವ ಅಭ್ಯರ್ಥಿಗಳಿಗೆ ನಾಮಪತ್ರ ಹಿಂಪಡೆಯಲು ಐದು ನಿಮಿಷಗಳ ಕಾಲಾವಕಾಶ ನೀಡಿದಾಗ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಮೀನಾಕ್ಷಿ ಜೋಡಟ್ಟಿ ಹಾಗೂ ಅನ್ನಪೂರ್ಣ ಮಾಳಗೆ ನಾಮಪತ್ರಗಳನ್ನು ವಾಪಸ್ ಪಡೆದುಕೊಂಡರು. ಅದೇ ರೀತಿ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ರಾಮಪ್ಪ ಸುಂಬಳಿ, ಅಜಿತ್ ದೇಸಾಯಿ ತಮ್ಮ ಉಮೇದುವಾರಿಕೆ ವಾಪಸ್ ಪಡೆದುಕೊಂಡರು.ನಂತರ ಸಭೆಯಲ್ಲಿ ಹಾಜರಿದ್ದ ಸದಸ್ಯರು ಕೈ ಎತ್ತುವ ಮೂಲಕ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಆಯ್ಕೆ ಮಾಡಿದರು.
90 ಸದಸ್ಯ ಬಲದ ಜಿಪಂಗೆ ಕಾಂಗ್ರೆಸ್ 43, ಬಿಜೆಪಿ 39, ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) 5, ಜೆಡಿಎಸ್ 2, ಕುಡಚಿ ಶಾಸಕ ಪಿ.ರಾಜೀವ್ ಅವರ ಕರ್ನಾಟಕ ಸ್ವರಾಜ್ಯ ಪಕ್ಷದ ಒಬ್ಬ ಸದಸ್ಯ ಆಯ್ಕೆಯಾಗಿದ್ದರು. ಪ್ರಾದೇಶಿಕ ಆಯುಕ್ತರೂ ಆಗಿರುವ ಜಿಲ್ಲಾಧಿಕಾರಿ ಎನ್. ಜಯರಾಮ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ನೂತನ ಜಿಲ್ಲಾ ಪಂಚಾಯತ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಜಿಲ್ಲಾಧಿಕಾರಿ ಎನ್.ಜಯರಾಮ್, ಜಿಪಂ ಸಿಇಓ ಡಾ.ಬಗಾದಿ ಗೌತಮ, ಅಪರ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಅವರು ಅಭಿನಂದಿಸಿದರು.

Comments