UK Suddi
The news is by your side.

ಸದ್ಯದಲ್ಲೇ ಬಂಡಾಯದ ವೀರ ಭೂಮಿ ನರಗುಂದದಲ್ಲಿ ಬಿಡುಗಡೆ “ಮಹಾಮರಣ”

image

ಸದ್ಯದಲ್ಲೇ ಹುಬ್ಬಳ್ಳಿಯ ಬಂಡಾಯದ ವೀರ ಭೂಮಿ ನರಗುಂದದಲ್ಲಿ ಬಿಡುಗಡೆ “ಮಹಾಮರಣ”

       ಬೆಂಗಳೂರು ನಗರ ಸೇರಿದಂತೆ ರಾಜ್ಯಾದ್ಯಾಂತ್ಯ ಉರಿಬಿಸಿಲಿನ ತಾಪ. ಎಲ್ಲೆಲ್ಲೂ ಕುಡಿಯುವ ನೀರಿಗೆ ಹಾಹಾಕಾರ, ಈಡೀ ದೇಶವೇ ನೀರಿನ ದಾಹ ಎದುರಿಸುತ್ತಿದೆ, ಪೃಕೃತಿ ವಿಕೋಪದ ಪರಿ ಇದು. ಇಂತಹ ವೇಳೆಯಲ್ಲಿ ಉತ್ತರ ಕರ್ನಾಟಕದ ಕಳಸಾ ಬಂಡೂರಿ ವ್ಯಾಪ್ತಿಯ 5 ಜಿಲ್ಲೆಗಳ ಸಾವಿರಾರು ಹಳ್ಳಿಗಳ ಜನರ ಸ್ಥಿತಿ ಹೇಳತೀರದು.
             ಕಳೆದ 54 ವರ್ಷಗಳಿಂದ ಹೋರಾಟ ನಡೆಯುತ್ತಿದ್ದರೂ ಈ ಸಮಸ್ಯೆ ಇನ್ನೂ ಬಗೆಯರಿಯದೇ ಉಳಿಯೋದಕ್ಕೆ ಕಾರಣವೇನು? ಕಳಸಾ ಬಂಡೂರಿ ಯೋಜನೆಯ ಹೆಸರಿನಲ್ಲಿ ಅಂದಿನಿಂದ ಇಂದಿನವರೆಗೆ ನಡೆಯುತ್ತಿರುವ ತೆರೆಮರೆಯ ರಾಜಕಾರಣವೇನು? ಅಲ್ಲಿನ ಜನರ ಕಷ್ಟಗಳು , ದಾರುಣ ಬದುಕಿನ ನ್ಯೆಜ್ಯ ಚಿತ್ರಣ. ಜೊತೆಗೆ ಈ ಯೋಜನೆ ಜಾರಿಯಾಗುವುದರಿಂದ ಅಲ್ಲಿನ ಜನರಿಗಾಗುವ ಪ್ರಯೋಜನಗಳೇನು? ಮಹಾದಾಯಿ ಅಚ್ಚುಕಟ್ಟು ಪ್ರದೇಶಗಳಿಂದ ಸರ್ಕಾರಕ್ಕೆ ಬರುವ ಬರೊಬ್ಬರಿ ವಾರ್ಷಿಕ ಆಧಾಯವೆಷ್ಟು ? ಇದರಿಂದ ಆರ್ಥಿಕ ವ್ಯವಸ್ಥೆಗೆ ಉಂಟಾಗುವ ಲಾಭವೆಷ್ಟು? ಈ ಯೋಜನೆಯಿಂದ ಹತ್ತು ಹಲವು ಬಗೆಯ ಪ್ರಯೋಜನ ಲಾಭಗಳಿದ್ದರೂ ಈ ಯೋಜನೆಗೆ ತಡೆಗಳೇಕೆ? ಈ ತಡೆಯ ಹಿಂದಿರುವ ಅಸಲೀ ಉದ್ದೇಶವೇನು? ಈ ಯೋಜನೆ ಜಾರಿಯಾದರೆ ರಾಜಕಾರಣಿಗಳಿಗೆಷ್ಟು ನಷ್ಟ? ರಾಜಕಾರಣದ ಲಾಭಕ್ಕೆ ಅರ್ದ ಕರ್ನಾಟಕ 54 ವರ್ಷಗಳಿಂದ ಅಭಿವೃದ್ದಿ ವಂಚಿತವಾಗಿದೆ, ರಾಜ್ಯದ ಅಭಿವೃದ್ದಿಯನ್ನು , ಜನರ ಹಿತಾಸಕ್ತಿಯನ್ನು ಲೆಕ್ಕಿಸದೆ ಮುಂದುವರೆದಿರುವ ರಾಜಕೀಯ, ಇಂತಹ ಹತ್ತು ಹಲವು ವಿಚಾರಗಳನ್ನು ಈ ಸಾಕ್ಷ್ಯಾಚಿತ್ರದ ಮೂಲಕ ಅತೀ ಶೀಘ್ರದಲ್ಲೇ ಸ್ಪೋಟಿಸಲಿದ್ದೇವೆ
         ಕಳಸಾ ಬಂಡೂರಿ ಯೋಜನೆಯ ಅಸಲೀ ಸತ್ಯಗಳನ್ನು ಸ್ಫೋಟಿಸುವ ಮಹಾಮರಣ ಸಾಕ್ಷ್ಯಾಚಿತ್ರವನ್ನು ಪತ್ರಕರ್ತ-ನಿರ್ದೇಶಕ ಡಿ.ಜೆ.ಚಕ್ರವರ್ತಿ ನಿರ್ದೇಶಿಸಿದ್ದಾರೆ. ರಾವಣಿ ಚಿತ್ರದ ನಿರ್ಮಾಪಕಿ ಪೂಜಾ ಗಾಂಧೀ ನಿರ್ಮಾಣ, ಶ್ರೀ ಕ್ರೇಜಿಮ್ಯೆಂಡ್ಸ್ ಸಂಕಲನದ ಜೊತೆಗೆ ಈ ಸಾಕ್ಷ್ಯಾಚಿತ್ರಕ್ಕೆ ಕ್ಯಾಮರಾ ಹಿಡಿದಿದ್ದಾರೆ. ವೀರ್ ಸಮರ್ಥ್ ಹಿನ್ನೆಲೆ ಸಂಗೀತ, ಶಿವ ಅರಶಿ ಸಹ ನಿರ್ದೇಶನ, ಹಿರಿಯ ಪ್ರಚಾರ ಕಲಾಕಾರ ಭೂಷಣ್ ಪ್ರಚಾರ ಕಲೆಯ ಜೊತೆಗೆ ಸಂಸ್ಕರಣ ಸಹ ಮಾಡಿದ್ದಾರೆ. ಉತ್ತರ ಕರ್ನಾಟಕದಾದ್ಯಾಂತ ಸತತ 15 ದಿನಗಳ ಚಿತ್ರೀಕರಣ ನಡೆಸಿರುವ ರಾವಣಿ ಚಿತ್ರತಂಡ ಸದ್ಯದಲ್ಲೇ ಸಾಕ್ಷ್ಯಾಚಿತ್ರವನ್ನು ಬಿಡುಗಡೆ ಮಾಡಲಿದೆ.

Comments