UK Suddi
The news is by your side.

ಬೆಳಗಾವಿ: ರೈಲಿನಲ್ಲಿ ಬಾಂಬ್ ವದಂತಿ

STATE_3

 ಬೆಳಗಾವಿ: ಮೈಸೂರಿನಿಂದ ರಾಜಸ್ಥಾನದ ಅಜ್ಮೀರ್ ನಗರಕ್ಕೆ ತೆರಳುವ ವಾರದ ಎಕ್ಸ್ಪ್ರೆಸ್ ರೈಲಿನ ಜನರಲ್ ಬೋಗಿಯೊಂದರಲ್ಲಿ ಬಾಂಬ್ ಇಡಲಾಗಿದೆ ಎಂಬ ಅನಾಮಧೇಯ ಕರೆ ಹಿನ್ನೆಲೆಯಲ್ಲಿ ನಾಲ್ಕೂವರೆ ತಾಸು ರೈಲನ್ನು ಬೆಳಗಾವಿ-ಖಾನಾಪುರ ರೈಲು ಮಾರ್ಗದ ದೇಸೂರು ರೈಲು ನಿಲ್ದಾಣದಲ್ಲಿ ತಪಾಸಣೆ ನಡೆಸಲಾಯಿತು. ದೇಸೂರು ರೈಲು ನಿಲ್ದಾಣಕ್ಕೆ ಮಧ್ಯಾಹ್ನ 12.30ಕ್ಕೆ ಆಗಮಿಸಿದ ರೈಲನ್ನು ತಡೆ ಹಿಡಿದು ಎಲ್ಲ 23 ಬೋಗಿಗಳನ್ನು ಸಮಗ್ರವಾಗಿ ಪರಿಶೀಲಿಸಿ, ಸ್ಪೋಟಕ ವಸ್ತು ಕಾಣಿಸದ್ದರಿಂದ ಸಂಜೆ 4.30ಕ್ಕೆ ಬಿಡಲಾಯಿತು. ಬೆಳಗಾವಿ ಗ್ರಾಮೀಣ ಎಸಿಪಿ ಗುರುಶಾಂತಪ್ಪ ನೇತೃತ್ವದಲ್ಲಿ ಗ್ರಾಮೀಣ ಠಾಣೆ ಪೊಲೀಸರು, ರೈಲ್ವೆ ಪೊಲೀಸರು, ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ತಂಡದ ಸಿಬ್ಬಂದಿ ದೇಸೂರು ರೈಲ್ವೆ ನಿಲ್ದಾಣಕ್ಕೆ ಧಾವಿಸಿ ತಪಾಸಣೆ ನಡೆಸಿದರು. ಬಾಂಬ್ ಪತ್ತೆ ದಳ, ಪೊಲೀಸರ ಜಂಟಿ ಕಾರ್ಯಾಚರಣೆ ಸಂದರ್ಭದಲ್ಲಿ ಮೂವರು ವ್ಯಕ್ತಿಗಳ ವಶದಲ್ಲಿದ್ದ ಮುಚ್ಚಿದ ಬಾಕ್ಸ್ ನಲ್ಲಿ ಹ್ಯಾಂಡ್ ಗ್ರೇನೇಡ್ ಪತ್ತೆಯಾಗಿವೆ. ತಾವು ಮಿಲಿಟರಿಗೆ ಸೇರಿದ್ದು, ಇವು ತರಬೇತಿಗೆ ಬಳಸುವ ಖಾಲಿ ಹ್ಯಾಂಡ್ ಗ್ರೇನೇಡ್ ಎಂದು ಈ ವ್ಯಕ್ತಿಗಳು ತಿಳಿಸಿದ್ದಾರೆ.

Comments