UK Suddi
The news is by your side.

ಅಪಘಾತ; ಸರಿಗಮಪ ವಿಜೇತ ಚನ್ನಪ್ಪಗೆ ಗಾಯ

image

ಬೆಂಗಳೂರು: ಕಾರು ಡಿಕ್ಕಿಯಾದ ಪರಿಣಾಮ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸರಿಗಮಪ ವಿಜೇತ ಚನ್ನಪ್ಪ ಗಾಯಗೊಂಡಿದ್ದಾರೆ. 

ಚನ್ನಪ್ಪ ಮಂಗಳವಾರ ಬೆಳಗ್ಗೆ ಗಾಯಕ ಅರ್ಜುನ್ ಜನ್ಯ ಅವರ ಸ್ಟುಡಿಯೋಗೆ ತೆರಳಿದ್ದರು. ಅಲ್ಲಿ ರೆಕಾರ್ಡಿಂಗ್ ಮುಗಿಸಿಕೊಂಡು ಬೈಕ್ ನಲ್ಲಿ ಹಿಂದಿರುಗುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದಿತ್ತು.

ಘಟನೆಯಿಂದ ಕೆಳಕ್ಕೆ ಬಿದ್ದ ಚನ್ನಪ್ಪ ಅವರ ಗಲ್ಲಕ್ಕೆ, ಕೈ, ಕಾಲಿಗೆ ಗಾಯವಾಗಿತ್ತು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು ಎಂಬುವುದಾಗಿ ಮೂಲಗಳು ತಿಳಿಸಿವೆ.

Comments