UK Suddi
The news is by your side.

“ಆದರ್ಶ ಬೀದಿಪುಸ್ತಕ ವ್ಯಾಪಾರಿ ಅಂಧ ಮಹೇಶ್ “

image

ಮಂಗಳವಾರ ಮುಂಜಾನೆ 10-30ರ ಸುಮಾರಿಗೆ ನಾನು ಗದಗದ ಮುನ್ಸಿಪಲ್ ಕಾಲೇಜ ಮುಂಬಾಗದಲ್ಲಿ ಬೈಕಮೇಲೆ ತೆರಳುತ್ತಿರುವಾಗ ಎದುರಿಗೆ ಒಬ್ಬ (ಆ)ಅಂಗವಿಕಲ ಒಂದು ಕೈಯಲ್ಲಿ ಒಂದು ಸ್ಟೀಕ್ ಹಿಡಿದು ಮತ್ತೊಂದು ಕೈಯಲ್ಲಿ ಏಳೆಂಟು ಪುಸ್ತಕ ಹಿಡಿದು ಅದು ಕನ್ನಡದ ಪುಸ್ತಕಗಳನ್ನು ಹಿಡಿದು ಪುಸ್ತಕ ತುಗೋರಪ್ಪಾ ಪುಸ್ತಕ ಅಂತಾ ಕೂಗುತ್ತಾ ಸಾಗುತ್ತಿದ್ದಾ ನನ್ನ ಹತ್ತಿರದಲ್ಲೇ ಬಂದು ಗಾಡಿಗೆ ಎದುರಾದ ನನ್ನ ಬೈಕ ತಗೆದುಕೊಂಡು ನಿಧಾನವಾಗಿ ಅವನ ಹತ್ತಿರ ನಿಂತೆ ಬೈಕಗೆ ಅವನ ಕೈ ಸ್ಟೀಕ್ ತಾಗಿದಾಗ ಅಣ್ಣಾ ಒಂದು ಪುಸ್ತಕ ಕೊಳ್ಳಿ ಎಂದು ಕೇಳಿಕೊಂಡ ಈ ಕಾಲದಲ್ಲಿ ಸಣ್ಣ ದೈಹಿಕ ವೈಕಲ್ಯವಿದ್ದರು ಬಿಕ್ಷೇ ಬೇಡಿ ಜೀವಿಸುವ ಸಾವಿರಾರು ಜನರ ಮಧ್ಯೆ ಈ ಬೀದಿ ಪುಸ್ತಕ ವ್ಯಾಪಾರಿ ನನಗೆ ಗ್ರೇಟ್ ಅನಿಸಿದ ಅವರ ಹೆಸರು ಮಹೇಶ ಗದಗ ನಗರ ಹೇಳಿ ಕೇಳಿ ಮುದ್ರಣಕಾಶಿ ಈ ಅಂದ ಸ್ವಾಭಿಮಾನ ದಿಂದ ಬಾಳಲು ಅವನಂತೆ ಹೃದಯ ಶ್ರೀಮಂತಿಕೆಯನ್ನು ಹೊಂದಿದ ಮಾಲಿಕ ನನಗೆ ಪುಸ್ತಕ ಮಾರಾಟ ಮಾಡಲು ನೆರವಾದರು ಎಂದು ಅನ್ನದಾತ ಮಾಲಿಕರನ್ನು ನೆನೆಯುವುದು ಮರೆಯಲಿಲ್ಲಾ ಅವನ ಸ್ವಾಭಿಮಾನದ ಕಿಚ್ಚು ನನಗೆ ಹೆಮ್ಮೆ ಅನಿಸಿತು .
               ಅವನಿಂದ ಒಂದು ಪುಸ್ತಕ ಕೊಳ್ಳಲು ಯೋಚಿಸಿ “ಕನ್ನಡ ವ್ಯಾಕರಣ‌” ಎಂಬ ಪುಸ್ತಕ ಕೊಂಡೆ ಅದರ ಮುಖಬೆಲೆ ಹದಿನೈದು ರೂಪಾಯಿ ಇತ್ತು ನಾನು ಇಪ್ಪತ್ತು ರೂಪಾಯಿ ನೀಡಿ ಐದು ರೂಪಾಯಿ ನೀನೆ ಇಟ್ಟುಕೋ ಎಂದು ಹೇಳಿದಾಗ ಅದನ್ನು ನಯವಾಗಿ ನಿರಾಕರಿಸಿದ ಮಹೇಶ ದಯಮಾಡಿ ನನ್ನ ಕೈಯಲ್ಲಿ ಐದು ರೂಪಾಯಿ ತಗೆದು ಕೊಳ್ಳಿ ಎಂದು ಕೈ ಮುಂದೆ ಚಾಚಿದ ನಾ ಅದು ಪ್ರೀತಿಯಿಂದ ನೀಡಿದ್ದೆನೆ ಇಟ್ಟುಕೊ ಎಂದು ಹೇಳಿದರೂ ಅವರು ದಯಮಾಡಿ ನನಗೆ ಕರುಣೆ ಬೇಡ ನೀವು ನನ್ನ ಪುಸ್ತಕ ಕೊಂಡು ಉಪಕಾರ ಮಾಡಿದ್ದಿರಿ ಅದರ ಮುಖಬೇಲೆಗಿಂತ ಹೆಚ್ಚಿನ ಹಣ ನೀಡಿ ನನಿಂದ ಬ್ರಷ್ಟಾಚಾರ ಮಾಡಿಸಬೇಡಿ ನನ್ನ ಶ್ರಮಕ್ಕೆ ತಕ್ಕ ನ್ಯಾಯಯುತ ಬೇಲೆ ಯಜಮಾನ ನೀಡುವ ರಿಯಾಯಿತಿ ನನಗೆ ಮನ ತೃಪ್ತಿ ಇದೆ ನನಗೆ ದಯಮಾಡಿ ಹೆಚ್ಚಿನ ಹಣ ನೀಡಿ ತಲೆ ತಗ್ಗಿಸುವ ಹಾಗೆ ಮಾಡಬೇಡಿ , ನಾನು ಸಮಾಜದಲ್ಲಿ ತಲೆ ಎತ್ತಿ ಸ್ವಾಭಿಮಾನ ದಿಂದ ಬಾಳಬೇಕು ಎಂದಾಗ ನನಗೆ ಉತ್ತರ ಬಾರದೆ ಆ ಮಹನಿಯನಿಂದ ಮತ್ತೊಂದು ಪುಸ್ತಕ ಕೊಂಡು ಹಣ ಸರಿಮಾಡಿದೆ. 
ಅಂಧನಾದರು ಇಂಥಹ ಸ್ವಾಭಿಮಾನದ ಜೀವನ ನಮಗೆಲ್ಲಾ ಆದರ್ಶವಾಗಬೇಕು , ಹೊರಜಗತ್ತನ್ನು ಹೊರಗಣ್ಣಿನಿಂದ ನೋಡಲು ಸಾದ್ಯವಾಗದಿದ್ದರು ಒಳಗಣ್ಣು ಇತರರಿಗೆ ಮಾದರಿಯಾಗಿ ಕಾರ್ಯಮಾಡುತ್ತಾ ಅಂದರ ಬಾಳ ಬೆಳಕಾಗಿದ್ದ ನಾಡಿನ ನಿಜದೈವವಾಗಿದ್ದ ಪಂಡಿತ ಪುಟ್ಟರಾಜರ ನಾಡಲ್ಲಿ ಅವರ ಆದರ್ಶ ಇಂದಿಗೂ ಅಂಧರ ಬಾಳಲ್ಲಿ ಹಾಸೂ ಹೊಕ್ಕಾಗಿದೆ ಅಂದರೆ ತಪ್ಪಾಗದು ಮಹೇಶನಂತೆ ನಾವೇಲ್ಲಾ ಶ್ರಮಕ್ಕೆ ತಕ್ಕ ಫಲ ಮಾತ್ರ ಪಡೆದರೆ ಬ್ರಷ್ಟಾಚಾರ ಮಾಯವಾಗಿ ಎಲ್ಲರೂ ಆದರ್ಶದ ಬದುಕು ಬಾಳುವಂತಾಗುವುದರಲ್ಲಿ ಎರಡು ಮಾತಿಲ್ಲಾ .ಇಂಥ ಆದರ್ಶಪ್ರಾಯ ವ್ಯಾಪಾರಿಗಳಿಗೆ ನನ್ನದೊಂದು ಸಲಾಂ .

-ಈರಪ್ಪ ಸೊರಟೂರ
irusoratur@gmail.com

Comments