ಬಿಸಿಲಿಗೆ ಜಾನುವಾರು ಬಲಿ
ಬೆಳಗಾವಿ: ಬಿಸಿಲಿಗೆ ಬಳಲಿ ಮೃತಪಟ್ಟ ದನಕರುಗಳ ಶವಗಳು ಗುಡ್ಡದಲ್ಲಿ ಅನಾಥವಾಗಿ ಬಿದ್ದಿವೆ!ಜಿಲ್ಲಾ ಕೇಂದ್ರದಿಂದ 22 ಕಿ.ಮೀ. ದೂರದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ತಾಲೂಕಿನ ಹೊಸ ವಂಟಮುರಿ ಗ್ರಾಮದಲ್ಲಿನ ದಯನೀಯ ಸ್ಥಿತಿ ಇದು. ನೀರು, ಮೇವು ಸಿಗದೆ ಒದ್ದಾಡುತ್ತಿರುವ ಜಾನುವಾರುಗಳು ಗುಡ್ಡಕ್ಕೆ ಮೇಯಲು ಹೋದಾಗ ಬಿಸಿಲಿನ ತಾಪ ತಾಳದೆ ಕುಸಿದು ಮೃತಪಟ್ಟಿವೆ. ಮೊದಲೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನಲುಗಿದ ರೈತರು, ಅವುಗಳ ಕಳೆಬರವನ್ನು ತಂದು ಅಂತ್ಯಸಂಸ್ಕಾರ ಮಾಡದ್ದರಿಂದ ಕಾಗೆ, ಹದ್ದುಗಳು ತಿಂದು ಹಾಕುತ್ತಿವೆ.
ಸಾಂಕ್ರಾಮಿಕ ರೋಗಗಳ ಭೀತಿ: ಗ್ರಾಮದಿಂದ 1-2 ಕಿ.ಮೀ. ದೂರದಲ್ಲಿರುವ ಗುಡ್ಡದ ಮಧ್ಯೆಯೇ ಸತ್ತು ಬಿದ್ದಿರುವ ಜಾನುವಾರು, ನಾಯಿ, ಹಂದಿಗಳ ಕಳೆಬರಗಳಿಂದ ಹಲವು ತಿಂಗಳಿಂದ ಸುತ್ತಲಿನ ಪರಿಸರದಲ್ಲಿ ದುರ್ವಾಸನೆ ಹರಡಿದೆ. ಜನ ದುರ್ವಾಸನೆಯಿಂದ ಕಂಗಾಲಾಗಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ.
News courtesy: Vijayavani