ಕಿಲಾರಹಟ್ಟಿಯಲ್ಲಿ ವಿಚಿತ್ರ ಕಾಯಿಲೆ
ಮ್ಯೆತು೦ಬ ಗುಳ್ಳೆ, ಉರಿ, ನವೆ, ಪರಚಿಕೊ೦ಡರೆ ಗಾಯ
ಕೊಪ್ಪಳ: ಸಮೀಪದ ಕಿಲಾರಹಟ್ಟಿ ಗ್ರಾಮಸ್ಥರಲ್ಲಿ ವಿಚಿತ್ರ ಕಾಯಿಲೆ ಯಿ೦ದಾಗಿ ಮ್ಯೆ ಮೇಲೆ ಗುಳ್ಳೆಗಳು ಕಾಣಿಸಿಕೊ೦ಡಿ ರುವುದರಿ೦ದ ಜನರು ಭೀತಿಗೆ ಸಿಲುಕಿದ್ದಾರೆ.
ಈ ಗ್ರಾಮದಲ್ಲಿ ಬಹುತೇಕ ಜನರ ಮ್ಯೆಮೇಲೆ ಗುಳ್ಳೆಗಳು ಕಾಣಿಸಿಕೊ೦ಡಿವೆ. ವಿಪರೀತ ಉರಿ ತಾಳಲಾರದೆ ಚಿಕ್ಕಮಕ್ಕಳು, ಹಿರಿಯರು, ಯುವಕರು ನೆರಳಿನ ಆಸರೆಗೆ ಮೊರೆ ಹೋಗಿದ್ದಾರೆ. ಇಲ್ಲಿಯ ಬಹುತೇಕ ಜನರು ಗುಳ್ಳೆಗಳಿ೦ದ ಬರುವ ತುರಿಕೆ ತಾಳಲಾರ ದೆ, ಮ್ಯೆ ಪರಚಿಕೊ೦ಡು ಗಾಯಗಳಾಗಿವೆ. ತೀವ್ರ ಉರಿ, ಜ್ವರದಿ೦ದ ತತ್ತರಿಸಿದ ಜನರು, ನಾನಾ ರೋಗಗಳ ಹೆಸರು ಹೇಳುತ್ತ ಮತ್ತಷ್ಟು ಗಾಬರಿಯಾಗಿದ್ದಾರೆ.