ಮನ್ ಕಿ ಬಾತ್ ಇನ್ಮುಂದೆ ಟೋಲ್ ಫ್ರೀ!
ಪ್ರಧಾನಿ ನರೇಂದ್ರ ಮೋದಿ ಅವರು ರೇಡಿಯೊದಲ್ಲಿ ನಡೆಸಿಕೊಡುವ ಮನ್ಕಿಬಾತ್ ಕಾರ್ಯಕ್ರಮ ಕೇಳಲು ಮರೆತಿರುವಿರಾ? ಪ್ರೋಗ್ರಾಂ ಮಿಸ್ ಮಾಡಿಕೊಂಡ್ನಲ್ಲಾ ಎಂದು ಚಿಂತಿಸುತ್ತಿರುವಿರಾ?
ನಿಮ್ಮ ಬಳಿ ಮೊಬೈಲ್ ಇದ್ದರೆ ಸಾಕು, ಬಯಸಿದಾಗಲೆಲ್ಲಾ ಮನ್ ಕಿ ಬಾತ್ ಕಾರ್ಯಕ್ರಮ ಕೇಳಬಹುದು. ಹೇಗಂತೀರ?
ಕೇಂದ್ರ ದೂರ ಸಂಪರ್ಕ ಇಲಾಖೆಯು 1922 ಎಂಬ ಹೊಸ ಟೋಲ್ ಫ್ರೀ ಸೇವೆ ಪ್ರಾರಂಭಿಸಿದ್ದು, ಈ ನಂಬರ್ಗೆ ಡಯಲ್ ಮಾಡಿ ಮೋದಿ ಅವರ ಮನ್ಕಿ ಬಾತ್ ಕಾರ್ಯಕ್ರಮವನ್ನು ಕೇಳಬಹುದಾಗಿದೆ.