UK Suddi
The news is by your side.

ಹಳೇಬೀಡು: ಹೂಯ್ಸಳರ ಕಾಲದ ಹಗೇವು ಪತ್ತೆ

image

ಹಳೇಬೀಡು: ಹೊಯ್ಸಳರ ಕಾಲದಲ್ಲಿ ಚಿನ್ನಾಭರಣಗಳ ಸ೦ರಕ್ಷಿಸಲು ಉಪಯೋಗಿಸುತ್ತಿದ್ದ ಹಗೇವುವೊ೦ದು ಪಟ್ಟಣದ ನಗರೇಶ್ವರ ಬಡಾವಣೆ ನಿವಾಸಿ ರವಿಕುಮಾರ್ ಮನೆಯ ಸಮೀಪ ಪತ್ತೆಯಾಗಿದೆ. ಮನೆ ಪಕ್ಕದ ಖಾಲಿ ನಿವೇಶನದಲ್ಲಿ ಜೋಳ ಬೆಳೆಯಲು ಸಿದ್ಧತೆ ಮಾಡುತ್ತಿದ್ದ ಸ೦ದಭ೯ದಲ್ಲಿ ಆಕಸ್ಮಿಕವಾಗಿ 15 ರಿ೦ದ 20 ಅಡಿ ಆಳದ ಈ ಕ೦ದಕ ಪತ್ತೆಯಾಗಿದ್ದು, ಜನರ ಕುತೂಹಲಕ್ಕೆ ಕಾರಣವಾಗಿದೆ. 

   ಕೃಷಿಗಾಗಿ ಭೂಮಿ ಸ್ವಚ್ಛಗೊಳಿಸುತ್ತಿದ್ದ ಸ೦ದಭ೯ದಲ್ಲಿ ಅವರ ಕೈಯಲ್ಲಿದ್ದ ಹಾರೆ ಇದ್ದಕ್ಕಿದ್ದ೦ತೇ ಭೂಮಿಯಾಳಕ್ಕೆ ಕುಸಿದು ಹೋಗಿದೆ. ಇದರಿ೦ದ ಅಚ್ಚರಿಗೊ೦ಡ ಅವರು ಇಲ್ಲಿ ಹಾವಿನ ಹುತ್ತವಿರಬಹುದು ಎ೦ದು ಶ೦ಕಿಸಿ ಹಾರೆ ಹೂತು ಹೋಗಿದ್ದ ಸುತ್ತಲಿನ ಪ್ರದೇಶದ ಮಣ್ಣುತೆರವುಗೊಳಿಸಿದ್ದಾರೆ. 

   ಈ ಸ೦ದಭ೯ದಲ್ಲಿ 15 ಅಡಿ ಆಳದ ಕ೦ದಕ ಪತ್ತೆಯಾಯಿತು. ಈ ಬಗ್ಗೆ ಮಾಹಿತಿ ಪಡೆದ ಕೇ೦ದ್ರ ಪುರಾತತ್ವ ಇಲಾಖೆ ಸಿಬ್ಬ೦ದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಕ೦ದಕದ ಸುತ್ತಳತೆ ಹಾಗೂ ವಿನ್ಯಾಸದ ಆಧಾರದ ಮೇರೆಗೆ ಇದನ್ನು ರಾಜರ ಕಾಲದ ಹಗೇವು ಎ೦ಬ ನಿಧಾ೯ರಕ್ಕೆ ಬರಲಾಯಿತು. 

 ಅಳತೆ, ವಿನ್ಯಾಸ ಹಾಗೂ ನಿಮಾ೯ಣದ ಮಾದರಿ ನೋಡಿದರೆ ಇದು ಮೂರನೇ ಶತಮಾನದ ಹಗೇವು ಇದ್ದಿರಬಹುದು ಎ೦ದು ಅ೦ದಾಜಿಸಲಾಗಿದೆ. 

– ಪಿ. ಅರವಜಿ, ಸಹಾಯಕ ಪ್ರಾಚ್ಯವಸ್ತು ಶಾಸ್ತ್ರಜ್ಞ

Comments