UK Suddi
The news is by your side.

ದೇಶದಲ್ಲಿ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಪೊಲೀಸ್ ಪೇದೆಗಳ ಮುಷ್ಕರ

image

ಯಾರೇ ಮುಷ್ಕರ ಹಮ್ಮಿಕೊಂಡ್ರೂ ಅಲ್ಲಿ ಪೊಲೀಸ್ ಬಂದೋಬಸ್ತ್ ಇದ್ದೇ ಇರುತ್ತೆ. ಆದ್ರೆ ಇದೀಗ ಪೊಲೀಸರೇ ಮುಷ್ಕರ ನಡೆಸಲು ಮುಂದಾಗಿದ್ದಾರೆ. ಜೂನ್ ನಾಲ್ಕರಂದು ಸಾಮೂಹಿಕ ರಜೆ ಹಾಕಿ ಪ್ರತಿಭಟನೆ ನಡೆಸಲು ನಡೆಸಲು ನಿರ್ಧರಿಸಿದ್ದಾರೆ.

ಆದರೆ ಪೊಲೀಸರಿಗೆ ರಜೆ ನೀಡಲು ಡಿಜಿ ನಿರಾಕರಿಸಿದ್ದಾರೆ. ಇದಕ್ಕೆ ರಾಜ್ಯ ಪೊಲೀಸ್ ಮಹಾ ಸಂಘ ಡಿಜಿ ಸಾಹೇಬ್ರಿ ಬಣ್ಣದ ಸೀರೆ, ಬಳೆ, ರವಿಕೆ, ಹೂ, ಅರಿಶಿಣ, ಕುಂಕುಮ ಗಿಫ್ಟ್ ಕೊಟ್ಟಿದ್ದಾರೆ.

ಡಿಜಿ ಸಾಹೇಬ್ರಿಗೆ ಈ ವಿಚಿತ್ರ ಗಿಫ್ಟ್ ಕೊಟ್ಟಿರೋದು ರಾಜ್ಯ ಪೊಲೀಸ್ ಮಹಾಸಂಘ. ವೇತನ ತಾರತಮ್ಯ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜೂನ್​ 4ರಂದು ಸಾಮೂಹಿಕ ರಜೆ ಹಾಕಿ ಪ್ರತಿಭಟನೆ ಮಾಡಲು ಪೊಲೀಸರು ನಿರ್ಧರಿಸಿದ್ದಾರೆ.

ಆದ್ರೆ ಅಂದು ರಜೆ ನೀಡಲು ಸಾಧ್ಯವಿಲ್ಲ. ರಜೆ ಹಾಕಿದವರಿಗ ಸಸ್ಪೆಂಡ್ ಮಾಡೋದಾಗಿ ಈ ಹಿಂದೆಯೇ ಡಿಜಿಪಿ ಓಂಪ್ರಕಾಶ್ ಹೇಳಿದ್ದರು. ಇದ್ಯಾವುದಕ್ಕೂ ಜಗ್ಗದ ರಾಜ್ಯ ಪೊಲೀಸ್ ಸಂಘದ ಅಧ್ಯಕ್ಷ ಶಶಿಧರ್, ಡಿಜಿಪಿ ಸಾಹೇಬ್ರಿಗೆ ಹೆಣ್ಮಕ್ಕಳಿಗೆ ಕೊಡುವ ಗಿಫ್ಟ್ ನೀಡುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.

ಅಂದು ಪೊಲೀಸರು ಪ್ರತಿಭಟನೆ ನಡೆಸಲ್ಲ ಅಂತಾ ಸಿಎಂ ಹೇಳಿದ್ರೆ, ಪೊಲೀಸರ ಜೊತೆ ನಮ್ಮ ಅಧಿಕಾರಿಗಳು ಮಾತುಕತೆ ನಡೆಸ್ತಾರೆ ಅಂತಾರೆ ಗೃಹ ಸಚಿವರು. ಮುಷ್ಕರಗಳನ್ನು ನಿಯಂತ್ರಿಸಬೇಕಾದ ಪೊಲೀಸರೇ ಇದೇ ಮೊದಲ ಬಾರಿಗೆ ಪ್ರತಿಭಟನೆ ನಡೆಸಲು ಮುಂದಾಗಿರುವುದು ರಾಜ್ಯ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದನ್ನು ಯಾವ ರೀತಿ ಸರ್ಕಾರ ನಿಭಾಯಿಸುತ್ತೋ ಕಾದು ನೋಡಬೇಕು.

Comments