ಅಪಘಾತದಲ್ಲಿ ಭಗತ್ಸಿಂಗ್ ಮೊಮ್ಮಗ ಸಾವು
ಭಗತ್ ಸಿಂಗ್ ಅವರ ಮೊಮ್ಮಗ ಅಭಿತೇಜ್ ಸಿಂಗ್ ಸಂಧು (22) ಭಾನುವಾರ ರಸ್ತೆ ಅಫಘಾತದಲ್ಲಿ ಮೃತಪಟ್ಟಿದ್ದಾರೆ.
ಹಿಮಾಚಲ ಪ್ರದೇಶದ ರಾಮಪುರ ಬಳಿಯ ಬುಶಹರ್ನಲ್ಲಿ ಅಭಿತೇಜ್ ಅವರು ಬೈಕ್ನಲ್ಲಿ ಹೋಗುತ್ತಿದ್ದಾಗ ಘಟನೆ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡಿದ್ದ ಅಭಿತೇಜ್ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಅಭಿತೇಜ್ ಅವರ ತಂದೆ ಅಭಯ್ ಸಿಂಗ್, ಭಗತ್ ಸಿಂಗ್ ಅವರ ಕಿರಿಯ ಸಹೋದರ. ಅಭಿತೇಜ್ ಅವರ ಸಾವಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.