UK Suddi
The news is by your side.

ಆಲೂರು ಎಂಬ ಬಾನಾಡಿಗಳ ಊರು

14ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕಿನ ಅಕ್ಕಿ ಆಲೂರು ಅಂತಿದೆ. ಅಲ್ಲಿಗೆ ಹೋದರೆ ದೊಡ್ಡ ಗಾತ್ರದ ಬಿಳಿ ಮೈದಾನ ನೋಡಲು ಮರೆಯದಿರಿ.  ಇತಿಹಾಸ ಪ್ರಸಿದ್ಧ ಈಶ್ವರ ದೇವರ  ಕೆರೆಯ ತುಂಬ ರಂಗವಲ್ಲಿ. ಯಾರಿಟ್ಟರೂ ಈ ರಂಗವಲ್ಲಿ? ಪ್ರತಿ ಚಳಿಗಾಲದಲ್ಲಿ ಇಂಥ ರಂಗವಲ್ಲಿ ಹಾಸುತ್ತದೆ. ದೂರದಿಂದ ನೋಡಿದರೆ ಇಡೀ ಕೆರೆಗೆ ಯಾರೋ ಬಿಳಿ ಸಮವಸ್ತ್ರ ಹೊದಿಸಿದ ಭಾಸವಾಗುತ್ತದೆ.

ಹೌದು, ವಲಸೆ ಹಕ್ಕಿಗಳ ಕಲರವ ಕಣ್ಮನ ತಣಿಸುತ್ತಿದೆ. ಸ್ವದೇಶಿ ಮತ್ತು ವಿದೇಶಿ ಹಕ್ಕಿಗಳು ಬಿಡಾರ ಹೂಡಿದ ಸಂಭ್ರಮ ನೀವು ನೋಡಬೇಕು.   ಕೆಲ ವರ್ಷಗಳಿಂದೀಚೆಗೆ ಈಶ್ವರ ದೇವರ ಕೆರೆ ಹತ್ತು, ಹಲವು ಅಪರೂಪದ ಪ್ರದೇಶಗಳ ಹಕ್ಕಿಗಳ ತಾಣವಾಗಿ ಪರಿವರ್ತನೆಗೊಳ್ಳುತ್ತಿದೆ. ಒಂದು ಕಾಲದಲ್ಲಿ ದೇಶ-ವಿದೇಶಗಳ ಹಕ್ಕಿಗಳಿಗೆ ಆಶ್ರಯ ಕಲ್ಪಿಸಿದ್ದ ಸಮೀಪದ ನರೇಗಲ್‌ ಕೆರೆಯೀಗ ಹನಿ ನೀರಿಲ್ಲದೇ ಭಣಗುಡುತ್ತಿರುವುದರಿಂದ ಇಲ್ಲಿನ ಕೆರೆಯನ್ನು ಹಕ್ಕಿಗಳು ಆಶ್ರಯಿಸಿದಂತೆ ಕಂಡು ಬರುತ್ತಿದೆ.

ಕೆಲ ದಿನಗಳಿಂದ ಈಶ್ವರ ದೇವರ ಕೆರೆ ಅಂಗಳದಿಂದ ಬಾನಾಡಿಗಳ ಚಿಲಿಪಿಲಿ ಕಲರವ ಮನಮೋಹಕವಾಗಿ ಕಂಡು ಬರುತ್ತಿದೆ. ಕೆರೆ ಅಂಗಳದಲ್ಲಿ ಹಿಂಡು ಹಿಂಡಾಗಿ ಜಮಾಯಿಸುತ್ತಿರುವ ಪಕ್ಷಿಪ್ರಿಯರು ಹಕ್ಕಿಗಳ ಮನಮೋಹಕ ಸೊಬಗನ್ನು ಸವಿಯುತ್ತಿದ್ದಾರೆ. ಜಗತøಸಿದ್ಧ ಗುಡವಿ ಪಕ್ಷಿಧಾಮ ಕೆಲವೇ ಕಿ.ಮೀ.ಗಳ ಅಂತರದಲ್ಲಿದೆ. ಈ ಪಕ್ಷಿಧಾಮಕ್ಕೆ ಭೇಟಿ ನೀಡುವ ಮಾರ್ಗ ಮಧ್ಯದಲ್ಲಿ ಇಲ್ಲಿಯ ಕೆರೆಯನ್ನು ಹಕ್ಕಿಗಳು ವಿಶ್ರಾಂತಿ ತಾಣವನ್ನಾಗಿಸಿಕೊಂಡಂತೆ ಕಂಡು ಬರುತ್ತಿದೆ.

ಸೊಬಗಿನ ಪರಿಸರ

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಕೆರೆಯ ಅಂಗಳದಲ್ಲಿ ಪಕ್ಷಿಗಳ ನಿನಾದ ಹೆಚ್ಚಿದಂತಿದೆ. ಬರೋಬ್ಬರಿ 145 ಎಕರೆಗಳಷ್ಟು ವಿಶಾಲ ಪ್ರದೇಶದಲ್ಲಿ ಹರಡಿಕೊಂಡಿರುವ ಈಶ್ವರ ದೇವರ ಕೆರೆ ಬಾನಾಡಿಗಳನ್ನು ಕೈಬೀಸಿ ಕರೆಯುವ ಸೊಬಗು ಹೊಂದಿದೆ. ಇಲ್ಲಿನ ಹಸಿರಿನ ವಾತಾವರಣ, ಸುತ್ತಲಿನ ತೋಟ-ಪಟ್ಟಿಗಳು, ಆನಂದ ಭಾವನೆ ಉಂಟು ಮಾಡುವ ಪರಿಸರವೇ ಕೆರೆಯನ್ನು ಪಕ್ಷಿಗಳ ವಿಶ್ರಾಂತಿ ಧಾಮವನ್ನಾಗಿ ಪರಿವರ್ತಿಸಿದೆ. ಸ್ಥಳೀಯ ಸೇರಿದಂತೆ ಸುತ್ತಲಿನ ಗ್ರಾಮಗಳ ಸಾವಿರಾರು ಎಕರೆ ಕೃಷಿ ಭೂಮಿಗೆ ನೀರುಣಿಸುವ ಸಾಮರ್ಥ್ಯದ ಪ್ರಮುಖ ನೀರಿನ ಮೂಲ ಈಶ್ವರ ದೇವರ ಕೆರೆ ಇದೀಗ ಪಕ್ಷಿಧಾಮವಾಗಿ ಬದಲಾಗಿದೆ.

ಭಿನ್ನ-ವಿಭಿನ್ನ ಪಕ್ಷಿಗಳ ಕಲರವ

ಪಕ್ಷಿ$ಗಳೇನೋ ಈ ಕೆರೆಗೆ ಹಿಂಡು ಹಿಂಡಾಗಿ ಲಗ್ಗೆ ಇಡುತ್ತಿವೆ. ಆದರೆ ಭೇಟಿ ನೀಡುತ್ತಿರುವ ಪಕ್ಷಿ$ಪ್ರಬೇಧಗಳ ಕುರಿತು ಸ್ಪಷ್ಟ ಮಾಹಿತಿ ಹುಡುಕಾಟವಾಗಿಲ್ಲ. ಇಲ್ಲಿ ಬಾರ್‌ ಹೆಡೆಡ್‌ ಗೂಸ್‌ (ಶಿರಾರೇಖೀ), ಕಾರ್ಮೊರಾಂಟ್‌ (ನೀರುಕಾಗೆ), ಗ್ರೆಹೆರಾನ್‌ (ಬೂದಬಕ), ಪಾಂಡ್‌ ಹೆರಾನ್‌ (ಕೊಳದಬಕ), ಓಪನ್‌ ಬಿಲ್‌ (ಕೊಕ್ಕರೆ), ಸ್ಲಾಟ್‌ ಬಿಲ್‌ (ಚುಕ್ಕೆಬಾತು) ಇನ್ನಿತರ ಭಿನ್ನ-ವಿಭಿನ್ನ ಪಕ್ಷಿಗಳ ಕಲರವ ಕಣ್ಣಿಗೆ ಹಬ್ಬ.

ಪಕ್ಷಿಗಳಿಗೆ ಮೊಟ್ಟೆಯನ್ನಿಡಲು ಈಶ್ವರ ದೇವರ ಕೆರೆಯ ಸುತ್ತಲಿನ ಪ್ರದೇಶ ಹೇಳಿ ಮಾಡಿಸಿದಂತಿದೆ. ಅಲ್ಲಲ್ಲಿ ಕಂಡು ಬರುವ ಹುಲ್ಲುಗಾವಲಿನಂಥ ಪ್ರದೇಶ ಪಕ್ಷಿಗಳ ವಾಸಕ್ಕೆ ಯೋಗ್ಯವಾಗಿದೆ. ಜನವಸತಿ ಪ್ರದೇಶವೂ ಇಲ್ಲಿಂದ ಬಹು ದೂರ ಇರುವುದರಿಂದ ಸ್ವಾತಂತ್ರ ಹೆಚ್ಚು. ಹೀಗಾಗಿ ಪಕ್ಷಿಗಳು ಕೆರೆ ಅಂಗಳದ ಏಕಾಂತದಲ್ಲಿ ಸಮಯ ಕಳೆಯುತ್ತಿವೆ. ಕೆಲ ಸಮಯ ಮಾತ್ರವೇ ಕೆರೆ ದಡದಲ್ಲಿ ಕಳೆಯುತ್ತಿರುವ ಪಕ್ಷಿಗಳು ದಿನದ ಬಹುತೇಕ ಸಮಯವನ್ನು ಕೆರೆಯ ಮಧ್ಯ ಭಾಗಕ್ಕೆ ಇಳಿಯುತ್ತಿದೆ.  ಇದರಿಂದ ಪಕ್ಷಿಗಳ ನೈಜ ಸೌಂದರ್ಯವನ್ನು ಕಣ್ತುಂಬಿಕೊಳ್ಳುವುದು ಬಹುತೇಕರಿಗೆ ಸಾಧ್ಯವಾಗುತ್ತಿಲ್ಲ. ಸೌಂದರ್ಯ ಸವಿಯುವ ನಿಶ್ಚಿತ ಮನಸ್ಸಿನೊಂದಿಗೆ ಕೆಲ ಪಕ್ಷಿ$ಪ್ರಿಯರು ಗಂಟೆಗಟ್ಟಲೇ ಕೆರೆ ದಡದಲ್ಲಿ ಕಾಯ್ದು ಕುಳಿತುಕೊಳ್ಳುವಂತಾಗಿದೆ.

ಟಿ. ಶಿವಕುಮಾರ

Read more at http://www.udayavani.com/kannada/news/multifaceted/131717/alur-town-of-swifts#CkGZfvOJ8vZocpjR.99

Comments