UK Suddi
The news is by your side.

ಸೋರಿಯಾಸಿಸ್ ಸಮಸ್ಯೆಯೇ?

image

ಸೋರಿಯಾಸಿಸ್ ಎಂಬುದು ಅತ್ಯಂತ ಕಿರಿಕಿರಿಯುಂಟುಮಾಡುವ ಚರ್ಮರೋಗ. ಚರ್ಮವು ಮೇಲೆದ್ದು, ಕೆಂಪಗಾಗಿ ಬಿಳಿಯ ಪೊರೆಬಿಟ್ಟಂತೆ ಕಾಣಿಸುತ್ತದೆ. ಈ ಲಕ್ಷಣಗಳು ಮೊಣಕಾಲು, ಮೊಣಕೈ ಹಾಗೂ ನೆತ್ತಿಯ ಚರ್ಮದ ಮೇಲೆ, ಹಸ್ತ, ಪಾದ ಮತ್ತು ದೇಹದ ಯಾವ ಭಾಗದಲ್ಲಾದರೂ ಕಾಣಿಸಬಹುದು. ಮನೋದೈಹಿಕ ಕಾಯಿಲೆ, ಬ್ಯಾಕ್ಟೀರಿಯಾ ಸೋಂಕು, ಆಟೋಇಮ್ಯುನ್ ಕಾಯಿಲೆ, ಔಷಧಗಳ ಅಡ್ಡಪರಿಣಾಮ ಹಾಗೂ ಆನುವಂಶಿಕವಾಗಿ ಇದು ಬರಬಹುದು.

ಲಕ್ಷಣಗಳು:

ಸೋರಿಯಾಸಿಸ್ ವಲ್ಗರಿಸ್: ಸಾಮಾನ್ಯ ಪೊರೆ/ಚಕ್ಕಳ ಏಳುವುದು.ಗ್ಲಟ್ಟೆಟ್ ಸೋರಿಯಾಸಿಸ್: ಚಿಕ್ಕದಾದ ನೀರಗುಳ್ಳೆಯಾಗುವುದು.ಇನ್ವರ್ಸ್ ಸೋರಿಯಾಸಿಸ್: ಕಂಕುಳು, ಹೊಕ್ಕಳು, ತೊಡೆಸಂದು ಹಾಗೂ ನಿತಂಬಗಳಲ್ಲಿ.ಪಸ್ಚುಲರ್ ಸೋರಿಯಾಸಿಸ್: ಕೀವು ತುಂಬಿದ ಹಳದಿಬಣ್ಣದ ಬೊಬ್ಬೆಗಳು ಏಳುವುದು.ಪಾಮೋಪ್ಲಾಂಟಾರ್ ಸೋರಿಯಾಸಿಸ್: ಹಸ್ತ ಹಾಗೂ ಪಾದಗಳಲ್ಲಿ ಕಾಣಿಸುವುದು.ಎರಿಥ್ರೋಡರ್ವಿುಕ್ ಸೋರಿಯಾಸಿಸ್: ಸಂಪೂರ್ಣ ದೇಹದ ಚರ್ಮವು ತೊಂದರೆಗೀಡಾಗಿರುತ್ತದೆ.ಸೋರಿಯಾಟಿಕ್ ಆರ್ಥ್ರೖರ್ೆಟಿಸ್: ಕೀಲು ಮೂಳೆಗಳು ನೋಯುತ್ತವೆ ನೈಲ್ ಸೋರಿಯಾಸಿಸ್: ಉಗುರುಗಳು ಹಳದಿ ಬಣ್ಣಕ್ಕೆ ತಿರುಗಿ ಗುಂಡಿ ಬೀಳುತ್ತವೆ.ಸ್ಕಾಲ್ಪ್ ಸೋರಿಯಾಸಿಸ್: ನೆತ್ತಿಯ ಚರ್ಮವು ತೊಂದರೆಗೀಡಾಗಿರುತ್ತದೆ ಹಾಗೂ ಕೂದಲುದುರುತ್ತದೆ.

ಆಹಾರ ಚಿಕಿತ್ಸೆ

ಹಸಿ ಹಣ್ಣು-ತರಕಾರಿಗಳು, ಮೊಳಕೆ ಕಾಳುಗಳು, ಶೇಂಗಾ, ಅಗಸೆಬೀಜ ಇತ್ಯಾದಿಗಳ ಸೇವನೆಯಿಂದ, 10-15 ದಿನಗಳು ಸಂಪೂರ್ಣವಾಗಿ ಇದೇ ನೈಸರ್ಗಿಕ ಆಹಾರವನ್ನು ಸೇವಿಸಿದರೆ ಕ್ರಮೇಣವಾಗಿ ಮಾಯವಾಗುತ್ತವೆ. ನಂತರ ಸಾಮಾನ್ಯ ಆಹಾರ ಸೇವಿಸುತ್ತ ಪುನಃ ನಿಸರ್ಗದತ್ತ ಹಣ್ಣು ತರಕಾರಿಗಳನ್ನೂ ಹೇರಳವಾಗಿ ಬಳಸಬೇಕು.ಇಲ್ಲದಿದ್ದಲ್ಲಿ ಸೋರಿಯಾಸಿಸ್ ಪುನರಾವರ್ತಿಸಬಹುದು.ಯಥೇಚ್ಛವಾಗಿ ಕ್ಷಾರೀಯ ಅಂಶ ಹೆಚ್ಚಿರುವ ಫಲಗಳನ್ನು ಸೇವಿಸಿ. ಉದಾ: ದಾಳಿಂಬೆ, ಸೇಬು, ಬಾಳೆಹಣ್ಣು ಹಾಗೂ ಪಪ್ಪಾಯ.ಒಮೇಗಾ 3 ಫ್ಯಾಟಿ ಆಸಿಡ್ ಪೂರಕ ಆಹಾರ ಸೇವನೆಯೂ ಸೋರಿಯಾಸಿಸ್ ಲಕ್ಷಣಗಳನ್ನು ಗುಣಪಡಿಸುತ್ತದೆ. ಅಗಸೆ ಬೀಜ, ಅಕ್ರೋಟು ಉತ್ತಮ ಆಹಾರಗಳಾಗಿವೆ.

ಕೊನೇ ಹನಿ

ಮೂಲಂಗಿ ರಸವನ್ನು ಊಟವಾದ ನಂತರ ಪ್ರತಿದಿನ ಸೇವಿಸುತ್ತಿದ್ದರೆ, ಮೂತ್ರಕೋಶದಲ್ಲಿನ ಕಲ್ಲು ಕರಗುತ್ತದೆ.

Comments