UK Suddi
The news is by your side.

ಒಳ್ಳೆ ಸರ್ಕಾರಕ್ಕೆ ಸಹಕರಿಸಿ.. ಭಾರತಾಂಬೆಯ ಏಳಿಗೆಗೆ ಶ್ರಮಿಸಿ..

image

ಅಚ್ಛೇ ದಿನ್ ಎಲ್ಲಿ ಅಚ್ಛೇ ದಿನ್ ಬಂತಾ?? ಅಂತ ಬಾಯ್ ಬಾಯ್ ಬಡ್ಕೊಳ್ಳೋ ಜನ, ಮೋದಿಯವರ ಎರಡು ವರ್ಷದ ಈ ಸರ್ಕಾರದಲ್ಲಿ ಒಂದೇ ಒಂದು ಹಗರಣ ತೋರಿಸಲಿ ನೋಡೋಣ..

60 ವರ್ಷ ಆಳಿ ದಿನಕ್ಕೊಂದು ಹಗರಣ ಮಾಡಿ ಎಣಿಕೆಗೆ ಸಿಗದಷ್ಟು ದುಡ್ಡು ಗುಳುಂ ಮಾಡಿ ತಮ್ಮ ತಮ್ಮ ಮನೆಗಳನ್ನು ಉದ್ದಾರ ಮಾಡಿಕೊಳ್ಳೋ ಆ ಟೈಮ್ ಇತ್ತಲ್ಲ  ಅದೇ ಈ ಜನರಿಗೆ ಅಚ್ಛೆದಿನ್ ದಂತಿತ್ತು ಅನ್ಸುತ್ತೆ..

ಜನ ಇನ್ನೂ ಆ ಎರಡು ವರ್ಷದ ಹಿಂದಿನ ಹಗರಣಗಳ ಬಗ್ಗೆನೇ ಮಾತಾಡ್ತಾ ಇದಾರೆ ಅಂದ್ರೆ ನೀವೇ ತಿಳ್ಕೊಳ್ಳಿ, ಮೋದಿ ಸರ್ಕಾರ  ಹಗರಣಮುಕ್ತ ಸರ್ಕಾರ ಅಂತ, ಈಗಿರುವುದು ಪಾರದರ್ಶಕ ಸರ್ಕಾರ. ಒಳ್ಳೇ ದಿನಗಳು ಬಂದ್ರೂನೂ ಅದನ್ನು ಸಹಿಸಿಕೊಳ್ಳಲಾರದ ಸ್ವಲ್ಪ ಜನ ಕಿರುಚ್ಕೋಳ್ತಾ ಇದಾರೆ.

ಇನ್ನು ಸರ್ವಿಸ್ ಟ್ಯಾಕ್ಸ್ಗೆ ಬಂದ್ರೆ ಜೂನ್ 1 ರಿಂದ 14.5% ಇರೋ ಟ್ಯಾಕ್ಸ್ 15% ಮಾಡಿದ್ರು. ಒಟ್ಟಾರೆ ಮೋದಿ ಸರ್ಕಾರ ಬಂದಮೇಲೆ 14% ಇರೋ ಟ್ಯಾಕ್ಸ್ 15% ಆಯ್ತು. ಅಂದ್ರೆ 0.5% ಸ್ವಚ್ಛ ಭಾರತ ಮಾಡುವ ನಿಧಿ ಗೆ ಮತ್ತೆ 0.5% ಕೃಷಿ ಕಲ್ಯಾಣ ನಿಧಿಗೆ ಅಂತ. ಮೋದಿ ಬಂದ್ ಮೇಲೆ 14% ಇರೋ ಟ್ಯಾಕ್ಸ್ 15% ಆಯ್ತು ಇನ್ನೂ ಎಷ್ಟು ಅಂತಾ ಟ್ಯಾಕ್ಸ್ ಕೊಡ್ಬೇಕು ಅಂತ ಜನ ಮಾತಾಡ್ಕೊಳ್ತಾ ಇದಾರೆ.
ಮೋದಿ ಟ್ಯಾಕ್ಸ್ ಜಾಸ್ತಿ ಮಾಡಿದ್ದು ಭಾರತದ ಸ್ವಚ್ಛತೆಗಾಗಿಯೇ ಹೊರತು ಬೇರೆ ಯಾವದೇ ಕಾರಣಕ್ಕೆ ಅಲ್ಲ, ದಿನಾಲು ನಾವು ಮುರುಹೊತ್ತು ಚನ್ನಾಗಿ ಹೂಟ್ಟೆತುಂಬ ತಿಂತಿವಲ್ಲ ರೈತರ ಹೆಸರು ಹೆಳ್ಕೊಂಡು ಅಂತ ರೈತರಿಗೆ ಒಳ್ಳೆದಾಗಲಿ ಅಂತ. ಮೋದಿ ಏನು ಟ್ಯಾಕ್ಸ್ ಜಾಸ್ತಿ ಮಡಿ ಸರ್ಕಾರದ ಖಜಾನೆ ತುಂಬಿ ಆದ್ಮೇಲೆ ಹಳೇ ಸರ್ಕಾರದ ಥರ ಕೋಟಿ ಕೋಟಿ ದುಡ್ಡು ಗುಳುಂ ಮಾಡಿ ತಮ್ಮ ಮನೆ ಉದ್ದಾರ ಮಾಡಿಕೊಳ್ಳೋ ವ್ಯಕ್ತಿ ಅಲ್ವೇ  ಅಲ್ಲ.

ಭಾರತವಿಂದು ಎಲ್ಲ ದೆಶಗಳೆದುರು ಎದೆ ಎತ್ತಿ ನಿಂತಿದೆ ಅಂದ್ರೆ ಅದಕ್ಕೆ ಕಾರಣ ಮೋದಿ. ಅವ್ರು ಎರಡು ವರ್ಷಗಳಲ್ಲಿ ಮಾಡಿರೋ ಕೆಲಸ ಒಂದೊಂದು ವಲಯದಲ್ಲೂ ಲಾಭಾಂಶ ತಂದು ಕೊಡುತ್ತಿದೆ.

ಮೋದಿಯವರನ್ನು ದ್ವೇಷಿಸುವ ಭರದಲ್ಲಿ ಭಾರತವನ್ನು ಹಾಗು ಭಾರತದ ಏಳಿಗೆಯನ್ನು ಕುಂಠಿತ ಗೊಳಿಸುವ ಕೆಲಸ ನಡೀತಾ ಇದೆ. ಸುಮ್ಮನೆ ಒಳ್ಳೆ ಕೆಲಸಗಳಿಗೆ ಕೆಸರೆರಚುವ ಬದಲು ಆ ಕೆಲಸಕ್ಕೆ ಸಪೋರ್ಟ್ ಮಾಡಿದ್ರೆ ಭಾರತ ಇನ್ನು ಕೆಲವೇ ವರ್ಷಗಳಲ್ಲಿ ಜಗದ್ಗುರು ಆಗುವ ಎಲ್ಲ ಲಕ್ಷಣಗಳು ಇವೆ.

ಒಳ್ಳೆ ಸರ್ಕಾರಕ್ಕೆ ಸಹಕರಿಸಿ.. ಭಾರತಾಂಬೆಯ ಏಳಿಗೆಗೆ ಶ್ರಮಿಸಿ..

ಗಂಗಾಧರ್ ಅಮ್ಮಲಜೇರಿ

Comments