ಅಫ್ಘನ್ ನಲ್ಲಿ ಮೈತ್ರಿ ಅಣೆಕಟ್ಟು ಉದ್ಘಾಟಿಸಿದ ಮೋದಿ
ಹೆರತ್: ಆಫ್ಘಾನಿಸ್ತಾನದಲ್ಲಿ ಭಾರತ ನಿರ್ಮಾಣ ಮಾಡಿರುವ ಸಲ್ಮಾ ಅಣೆಕಟ್ಟನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಆಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಅವರು ಶನಿವಾರ ಉದ್ಘಾಟಿಸಿದ್ದಾರೆ.
ಅಣೆಕಟ್ಟು ಒಟ್ಟು ಸುಮಾರು ರು.1,700 ಕೋಟಿ ವೆಚ್ಚದ ಅಣೆಕಟ್ಟನ್ನು ಮಾಡಿ ಬಳಿಕ ಮಾತನಾಡಿದ ಆಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ, ಅಣೆಕಟ್ಟು ನಿರ್ಮಾಣ ಸುಮಾರು 40 ವರ್ಷಗಳ ಕನಸಾಗಿತ್ತು ಇದನ್ನು ಭಾರತದ ಸಹಕಾರದಿಂದ ನನಸಾಗಿದೆ. ಇದು ನಮ್ಮ ಗೆಳೆತನದ ಸಂಕೇತ ಎಂದಿದ್ದಾರೆ.
1976ರಲ್ಲಿ ನಿರ್ಮಾಣಗೊಂಡಿದ್ದ ಈ ಅಣೆಕಟ್ಟನ್ನು ಸಲ್ಮಾ ಡ್ಯಾಮ ಎಂದು ಕರೆಯಲಾಗುತ್ತಿತ್ತು. ಬಳಿಕ ನಡೆದ ನಾಗರಿಕ ಯುದ್ಧದ ಸಂದರ್ಭದಲ್ಲಿ ಇದು ಹಾನಿಗೊಳಗಾಗಿತ್ತು. ಅದನ್ನು ಭಾರತದ ಸಹಯೋಗದಲ್ಲಿ ಪುನರ್ ನಿರ್ಮಾಣ ಮಾಡಲಾಗಿದೆ.
ಭಾರತದ ಪಾಲುದಾರಿಕೆಯೊಂದಿಗೆ 1700 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಅಣೆಕಟ್ಟು 75,000 ಹೆಕ್ಟೇರ್ ಭೂಮಿಗೆ ನೀರಾವರಿ ಕಲ್ಪಿಸುವುದರ ಜೊತೆಗೆ 42 ಮೆವಾ ವಿದ್ಯುತ್ ಉತ್ಪಾದಿಸಲಿದೆ.