UK Suddi
The news is by your side.

ಅಮರಗೋಳದ ಯೋಧ ಸತೀಶ್ ಸತೀಶ ಹುತಾತ್ಮ

ಹುಬ್ಬಳ್ಳಿ: ಛತ್ತೀಸ್‌ಗಢದ ದಾಂತೇವಾಡ ಬಳಿಯ ಮಾಲೇವಾಡಾ ಅರಣ್ಯ ಪ್ರದೇಶದಲ್ಲಿ ನಕ್ಸ­ಲರು ಭೂಮಿ­ಯೊಳಗೆ ಹುದುಗಿ­ಸಿ ಟ್ಟಿದ್ದ ಬಾಂಬ್ ಸ್ಫೋಟ ಅಮರಗೋಳದ ಯೋಧ ಸತೀಶ್ ವೆಂಕಪ್ಪ ಸಾಯಣ್ಣವರ (31) ಹುತಾತ್ಮ­ ರಾಗಿದ್ದಾರೆ. ಸತೀಶ 11 ವರ್ಷಗಳಿಂದ ಸಿಆರ್‌ಪಿಎಫ್ ನಲ್ಲಿ ಸೇವೆ ಸಲ್ಲಿಸು­ತ್ತಿದ್ದರು. ಅವರ ತಂದೆ ವೆಂಕಪ್ಪ ಸಹ ಸೇನೆ ಕಾರ್ಯನಿರ್ವಹಿಸಿ ಹುತಾತ್ಮರಾಗಿದ್ದಾರೆ.

ತಾಯಿ ನಾಗವ್ವ, ಸಹೋದರ ನಿರಂಜನ, ಸಹೋದರಿ ಜೈಶೀಲಾ ಅವರನ್ನು ಅಗಲಿದ್ದಾರೆ. ಮಂಗಳವಾರ ಸಂಭವಿಸಿದ ದುರ್ಘಟನೆಯಲ್ಲಿ ಸತೀಶ ಸೇರಿ ಏಳು ಯೋಧರು ಹುತಾತ್ಮರಾಗಿದ್ದಾರೆ. ಸತೀಶ್ ಅವರ  ಪಾರ್ಥಿವ ಶರೀರ ಬುಧವಾರ ಮಧ್ಯಾಹ್ನ ಗೋವಾ ಮೂಲಕ ಅಮರಗೋಳಕ್ಕೆ ತಲುಪಲಿದೆ. ಸಕಲ ಸೇನಾ ಗೌರವದೊಂದಿಗೆ ಅಮರಗೋಳದಲ್ಲಿಯೇ ಯೋಧನ ಅಂತ್ಯಸಂಸ್ಕಾರ ನಡೆಯಲಿದೆ.

Comments