ಕಳಸಾಬಂಡೂರಿ ಹೋರಾಟ: ರೈತ ಸಾವು
ಬೆಳಗಾವಿ: ಪ್ರತಿಭಟನೆ ವೇಳೆ ರೈತ ಸಾವು. ಧರ್ಮಣ್ಣ ತಹಸಿಲ್ದಾರ ಸಾವನ್ನಪ್ಪಿದ ರೈತ. ಹೃದಯಾಘಾತದಿಂದ ರೈತ ಸಾವನ್ನಪ್ಪಿರೋ ಮಾಹಿತಿ. ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ನಡೆಯತ್ತಿರೋ ಪ್ರತಿಭಟನೆ. ರೋಣ ತಾಲೂಕಿನ ಯಾವಗಲ ಗ್ರಾಮದ ರೈತ ಧರ್ಮಣ್ಣ.
ಜಿಲ್ಲಾಧಿಕಾರಿ ಕಚೇರಿ ಬಳಿ ನಡೆಯುತ್ತಿರುವ ಪ್ರತಿಭಟನೆ ಸ್ಥಳದಲ್ಲಿ ಬಿಗುವಿನ ವಾತಾವರಣ. ರೈತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ. ಕಳಸಾಬಂಡೂರಿ ಯೋಜನೆ, ಕಬ್ಬಿನ ಬಾಕಿ ಬಿಲ್ ಸೇರಿದಂತೆ ವಿವಿಧ ಬೇಡಿಕೆಯ ಈಡೇರಿಕೆಗಾಗಿ ಕಳೆದ ಐದು ತಿಂಗಳಿಂದ ಪ್ರತಿಭಟನೆ ನಡೆಸುತ್ತಿದ್ದ ರೈತರು.
ಇಂದು ಬೆಳಗಾವಿ ಸಂಸದ ಸುರೇಶ ಅಂಗಡಿ ಮನೆಗೆ ಮುತ್ತಿಗೆ ಹಾಕಲು ಬೇರೆ ಬೇರೆ ಭಾಗಗಳಿಂದ ಬಂದಿದ್ದ ರೈತರು. ಸ್ಥಳಕ್ಕೆ ಜಿಲ್ಲಾಧಿಕಾರಿ ಎನ್.ಜಯರಾಮ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಮೊಕ್ಕಾಂ.